×
Ad

ದ.ಕ ಜಿಲ್ಲಾ ಪತ್ರಕರ್ತರ ಕ್ರೀಡಾ ಕೂಟಕ್ಕೆ ಚಾಲನೆ

Update: 2016-12-11 15:06 IST

ಮಂಗಳೂರು,ಡಿ.11: ದಕ್ಷಿಣ ಕನ್ನಡ  ಕಾರ್ಯನಿರತ ಪತ್ರಕರ್ತರ ಸಂಘ, ಪ್ರೆಸ್ ಕ್ಲಬ್ ಹಾಗೂ ಪತ್ರಿಕಾ ಭವನ ಟ್ರಸ್ಟ್ ವತಿಯಿಂದ ನಗರದ ನೆಹರೂ  ಮೈದಾನದಲ್ಲಿ   ಹಮ್ಮಿಕೊಂಡ ಪತ್ರಕರ್ತರ ವಾರ್ಷಿಕ ಕ್ರೀಡಾ ಕೂಟಕ್ಕೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಮೋಹನ್ ಆಳ್ವಾ ಚಾಲನೆ ನೀಡಿ ಶುಭ ಹಾರೈಸಿದರು.

ಕ್ರೀಡೆ ಮಾನುಷ್ಯನ ಬದುಕಿನಲ್ಲಿ ವಿವಿಧ ಗುರಿಯೊಂದಿಗೆ ನಡೆಯುತ್ತಿದೆ. ನಮ್ಮ ಬದುಕಿನ  ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕಾಗಿ ಕ್ರೀಡೆಯ ಅಗತ್ಯವಿದೆ ಎಂದು ಪತ್ರಕರ್ತರ ಕ್ರೀಡಾ ಕೂಟಕ್ಕೆ ಶುಭ ಹಾರೈಸಿದರು.

 ಸಮಾರಂಭದ ಮುಖ್ಯ ಅತಿಥಿಯಾಗಿ   ಮೇಯರ್ ಹರಿನಾಥ್  ಹರಿನಾಥ್ ಮಾತನಾಡುತ್ತಾ ಸಮಾಜದ  ಹಿತದೃಷ್ಟಿಯಿಂದ  ಪತ್ರಕರ್ತರು  ಕಾಲ ಕಾಲಕ್ಕೆ ನೀಡುತ್ತಾ  ಬರುತ್ತಿರುವ  ವಿಮರ್ಶೆ ಟೀಕೆಗಳ ಬಗ್ಗೆ  ನನಗೆ  ಗೌರವವಿದೆ. ಅದು ನಮ್ಮ ಕರ್ತವ್ಯವನ್ನು  ಸಮರ್ಪಕವಾಗಿ ನಿರ್ವಹಿಸಲು  ಸಹಕಾರಿಯಾಗುತ್ತದೆ ಎಂದು ಶುಭ ಹಾರೈಸಿದರು.ಮಾಜಿ ಮೇಯರ್ ಶಶಿಧರ ಹೆಗ್ಡೆ, ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಕವಿತಾ ಸನಿಲ್, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ಕಾರ್ಯದರ್ಶಿ  ಶ್ರೀನಿವಾಸ್ ಇಂದಾಜೆ  ,ಹಿರಿಯ ಪತ್ರಕರ್ತ ಮನೋಹರ  ಪ್ರಸಾದ್ ,ಪ್ರೆಸ್ ಕ್ಲಬ್ ನ ಅಧ್ಯಕ್ಷ ರೋನಾಲ್ಡ್ ಅನಿಲ್ ಫೆರ್ನಾಂಡಿಸ್, ಕಾರ್ಯದರ್ಶಿ ಇಬ್ರಾಹೀಂ  ಅಡ್ಕಸ್ಥಳ ,ಪತ್ರಿಕಾ ಭವನ ಟ್ರಸ್ಟ್ ನ  ಅಧ್ಯಕ್ಷ ಆನಂದ ಶೆಟ್ಟಿ, ಕಾರ್ಯದರ್ಶಿ ಪುಷ್ಪರಾಜ್ ಬಿ.ಎನ್ ಮೊದಲಾದವರು ಉಪಸ್ಥಿತರಿದ್ದರು.

ಪತ್ರಕರ್ತ ರವೀಂದ್ರ  ಶೆಟ್ಟಿ  ಸ್ವಾಗತಿಸಿದರು. ಹರೀಶ್ ರೈ ಕಾರ್ಯಕ್ರಮ  ನಿರೂಪಿಸಿದರು.ಉದ್ಘಾಟನಾ  ಕಾರ್ಯಕ್ರಮದ ಬಳಿಕ  ಪತ್ರಕರ್ತರಿಗಾಗಿ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಿತು.

ಸಂತಾಪ: ಪತ್ರಕರ್ತರ ಕ್ರೀಡಾ ಕೂಟಕ್ಕೆ ಮೊದಲು ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಾಗಿದ್ದ ಛಾಯಾಚಿತ್ರಗಾರ ಅಹ್ಮದ್ ಅನ್ವರ್ ಅವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News