ಮೋದಿ ಭಾಷಣ ಮಾಡದಂತೆ ಯಾರು ತಡೆದಿದ್ದಾರೆ: ದಿಗ್ವಿಜಯ್ ಸಿಂಗ್ ಪ್ರಶ್ನೆ
ಹೊಸದಿಲ್ಲಿ, ಡಿಸೆಂಬರ್ 11: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯ ನಂತರ ದಿಗ್ವಿಜಯ್ ಸಿಂಗ್ ಪ್ರಧಾನಿ ಮೋದಿಯ ವೇಳೆ ಟೀಕಾಸ್ತ್ರ ಪ್ರಯೋಗಿಸಿದ್ದಾರೆ. ಮೋದಿ ಸಂಸತ್ತಿನಲ್ಲಿ ವಿಪಕ್ಷಗಳು ತನ್ನನ್ನು ಮಾತಾಡಲು ಬಿಡುತ್ತಿಲ್ಲ ಎಂದು ಆರೋಪಿಸುತ್ತಿದ್ದಾರೆ. ಆದರೆ ಈಗ ಮೋದಿಯವರ ಸಂಜ್ಞೆಯಲ್ಲಿ ಸಂಸತ್ತು ಇದೆ. ಹಿಟ್ಲರ್ ಇದ್ದಾಗ ಜರ್ಮನಿ ಸಂಸತ್ತನ್ನು ಉರಿಸಲಾಗಿತ್ತು. ನಿಮಗೆ ಭಾಷಣ ಮಾಡದಂತೆ ಯಾರು ತಡೆದಿದ್ದಾರೆ. ನೀವೆಷ್ಟು ಸುಳ್ಳು ಹೇಳುತ್ತೀರಿ" ಎಂದು ದಿಗ್ವಿಜಯ್ ಸಿಂಗ್ ಟ್ವೀಟ್ ಮಾಡಿದ್ದಾರೆ.
ನರೇಂದ್ರಮೋದಿ ವಿರುದ್ಧ ನೋಟು ಅಮಾನ್ಯಗೊಳಿಸಿದ್ದನ್ನು ಪ್ರಶ್ನಿಸಿ ಸಂಸತ್ತಿನಲ್ಲಿ ವಿಪಕ್ಷಗಳು ಗಲಾಟೆ ಮಾಡಿದ್ದವು. ಇದನ್ನು ಮುಂದಿಟ್ಟುಮೋದಿ ಲೋಕಸಭೆಯಲ್ಲಿ ಮಾತಾಡಲು ತನಗೆ ವಿಪಕ್ಷಗಳು ಬಿಡುತ್ತಿಲ್ಲ ಎಂದು ಹೋದಲ್ಲೆಲ್ಲ ಹೇಳುತ್ತಾ ಬರುತ್ತಿದ್ದಾರೆ. ಗುಜರಾತ್‌ನ ಬನಾಸಕಾಂಟಾದಲ್ಲಿ ಒಂದು ಸಭೆಯಲ್ಲಿ ಮೋದಿ ಸರಕಾರದ ನೋಟು ಅಮಾನ್ಯಗೊಳಿಸಿದ ಕುರಿತ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಲು ಸಿದ್ಧ ಎಂದು ಹೇಳಿದ್ದರೆಂದು ವರದಿತಿಳಿಸಿದೆ.