×
Ad

ಮೂರ್ತಿವಿಸರ್ಜನೆ ವೇಳೆ ದೋಣಿ ಮುಳುಗಿ ಐವರು ಭಕ್ತರ ಸಾವು

Update: 2016-12-11 16:25 IST

ಲಕ್ನೊ,ಡಿ. 11: ಲಕ್ನೊದ ಠಾಕುರ್‌ಗಂಜ್‌ನಲ್ಲಿ ಮೂರ್ತಿ ವಿಸರ್ಜನೆಯ ವೇಳೆ ದೋಣಿ ಮುಳುಗಡೆಯಾದ ಪರಿಣಾಮ ನಾಲ್ವರು ಯುವಕರ ಸಹಿತ ಒಟ್ಟು ಐದು ಮಂದಿ ಭಕ್ತರು ಮೃತರಾದ ಘಟನೆ ವರದಿಯಾಗಿದೆ. ದೋಣಿ ಚಲಾಯಸುತ್ತಿದ್ದ ವ್ಯಕ್ತಿಯನ್ನು ಜೀವಂತವಾಗಿ ನದಿಯಿಂದ ಮೇಲೆತ್ತಲಾಗಿದೆ.

 ಪೊಲೀಸರು ತಿಳಿಸಿರುವ ಪ್ರಕಾರ ಠಾಕುರ್‌ಗಂಜ್‌ನ ಶೇಖ್‌ಪುರ ಹಬೀಪುರ ಗ್ರಾಮದಲ್ಲಿ ಅರ್ಪಿತ್,(19), ದೀಪೂ(24), ಪಿಂಟೂ(24), ಚೋಟೆ(28), ಮತ್ತು ಹದಿನಾರು ವರ್ಷದ ಬಲರಾಮ್ ದೋಣಿ ಚಲಾಯಿಸುತ್ತಿದ್ದ ರಾಜು ದೋಣಿಯಲ್ಲಿ ಮೂರ್ತಿಯಿಟ್ಟು ವಿಸರ್ಜನೆಗೆ ಗೋಮತಿ ನದಿಗೆ ಹೋಗಿದ್ದರು. ಮೂರ್ತಿ ವಿಸರ್ಜಿಸಿದ ಬಳಿಕ ದೋಣಿ ಅನಿರೀಕ್ಷಿತವಾಗಿ ಪಲ್ಟಿಯಾಗಿದ್ದು ರಾಜುವನ್ನು ಹೊರತೆಗೆಯಲು ಸಾಧ್ಯವಾಗಿದೆ. ಉಳಿದವರೆಲ್ಲರೂ ಮೃತರಾಗಿದ್ದಾರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News