×
Ad

ಬಂಟ್ವಾಳ: ಅಕ್ರಮ ಗಾಂಜಾ ಸಾಗಾಟ ಮಾಡುತ್ತಿದ್ದವರ ಬಂಧನ

Update: 2016-12-11 16:59 IST

ಬಂಟ್ವಾಳ, ಡಿ.11 : ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರ ಕಾರ್ಯಾಚರಣೆಯೊಂದರಲ್ಲಿ  ಅಕ್ರಮ ಗಾಂಜಾ ಸಾಗಾಟ  ಮಾಡುತ್ತಿದ್ದ ವ್ಯಕ್ತಿಗಳಿಬ್ಬರನ್ನು  ಬಂಧಿಸಲಾಗಿದೆ.

ಬಂಧಿತರನ್ನು ಸಾಲೆತ್ತೂರು ನಿವಾಸಿ  ಕಟ್ಟತ್ತಿಲ ಅಬ್ದುಲ್ ಖಾದರ್ ರವರ ಮಗ ಇಮ್ರಾನ್ .ಎನ್  ಹಾಗೂ  ಮೆದು ನಿವಾಸಿ ಇಬ್ರಾಹಿಂರವರ ಮಗ ಜಲಾಲುದ್ದಿನ್ ಎಂದು ಗುರುತಿಸಲಾಗಿದೆ.

ಮಂಚಿ ಗ್ರಾಮದ ಪತ್ತುಮುಡಿಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದ್ದು, ಈ ಸಂದರ್ಭ 1 ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ.

 ಬಂಟ್ವಾಳ ವೃತ್ತನಿರೀಕ್ಷಕ ಶ್ರೀ ಮಂಜಯ್ಯ ನೇತ್ರತ್ವದಲ್ಲಿ ಗ್ರಾಮಾಂತರ ಪೊಲೀಸ್ ಸಿಬ್ಬಂದಿಗಳಾದ ಜಯರಾಮ,ಮಾಧವ,ಸುರೇಶ್, ಜಗದೀಶ , ನಜೀರ್ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

.ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಕಲಂ 8 ಸಿ ,20ಬಿ NDPS ACT ರಂತೆ ಪ್ರಕರಣ ದಾಖಲಿಸಿಕೊಂಡಿದ್ದು ಆರೋಪಿಗಳನ್ನುನ್ಯಾಯಾಲಯಕ್ಕೆ ಹಾಜಾರುಪಡಿಸಲಾಗಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News