×
Ad

‘ಬೀದಿ ಬದಿ ವ್ಯಾಪಾರಸ್ಥರ ವಲಯ’ದಲ್ಲಿ ಅನ್ಯಾಯ: ಆರೋಪ

Update: 2016-12-11 17:37 IST

ಮಂಗಳೂರು, ಡಿ.11: ನಗರದ ಬೀದಿ ಬದಿ ವ್ಯಾಪಾರಸ್ಥರಿಗೆ ಪುರಭವನದ ಬಳಿ ಪ್ರತ್ಯೇಕ ‘ಬೀದಿ ಬದಿ ವ್ಯಾಪಾರಸ್ಥರ ವಲಯ’ಕ್ಕೆ ಚಾಲನೆ ನೀಡಲಾಗಿದ್ದರೂ ಕೂಡ ಅಲ್ಲಿ ಸ್ಥಳೀಯರಿಗೆ ಅವಕಾಶ ನೀಡದೆ ಹೊರ ರಾಜ್ಯದ ವ್ಯಾಪಾರಿಗಳಿಗೆ ಹೆಚ್ಚು ಕಾರ್ಡು ವಿತರಿಸಿ ಅವಕಾಶ ಕಲ್ಪಿಸುವ ಮೂಲಕ ಅನ್ಯಾಯ ಎಸಗಿದೆ ಎಂದು ಮಂಗಳೂರು ನಗರ ಅಲ್ಪಸಂಖ್ಯಾರ ಮತ್ತು ಹಿಂದುಳಿದ ವರ್ಗಗಳ ಬೀದಿ ಬದಿ ವ್ಯಾಪಾರಸ್ಥರ ಸಂಘ ಆರೋಪಿಸಿದೆ.

ದ.ಕ.ಜಿಲ್ಲೆಯ ಬಡ, ನಿರ್ಗತಿಕ ಬೀದಿ ಬದಿ ವ್ಯಾಪಾರಿಗಳಿಗೆ ಮನಪಾ ಮೊದಲು ಆದ್ಯತೆ ನೀಡಬೇಕು. ಅವೈಜ್ಞಾನಿಕವಾಗಿ ವಿತರಿಸಿದ ಕಾರ್ಡುಗಳನ್ನು ರದ್ದುಪಡಿಸಬೇಕು, ವ್ಯಾಪಾರಸ್ಥರಿಗೆ ಪೂರ್ಣಪ್ರಮಾಣದ ಭದ್ರತೆ ನೀಡಬೇಕು ಎಂದು ಸಂಘದ ಕಾರ್ಯದರ್ಶಿ ರಿಯಾಝ್ ಹರೇಕಳ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News