ಮಾನವ ಹಕ್ಕುಗಳ ಸಮಿತಿಯಿಂದ ವಿವಿಧ ಕಾರ್ಯಕ್ರಮ

Update: 2016-12-11 12:10 GMT

ಮಂಗಳೂರು, ಡಿ.11: ರಕ್ತದ ಕೊರತೆಯಿಂದ ಅದೆಷ್ಟೋ ರೋಗಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ದ.ಕ. ಮಾನವ ಹಕ್ಕುಗಳ ಸಮಿತಿಯು ರಕ್ತದಾನದಂತಹ ಕಾರ್ಯ ಮಾಡುವ ಮೂಲಕ ಸಮಾಜಮುಖಿ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳುತ್ತಿರುವುದು ಶ್ಲಾಘನೀಯ ಎಂದು ಮುಡಾ ಅಧ್ಯಕ್ಷ ಸುರೇಶ್ ಬಳ್ಳಾಲ್ ಅಭಿಪ್ರಾಯಪಟ್ಟರು.

ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆಯ ಅಂಗವಾಗಿ ದ.ಕ ಮಾನವ ಹಕ್ಕುಗಳ ಸಮಿತಿಯು ಭಾರತೀಯ ರೆಡ್‌ಕ್ರಾಸ್ ಇವರ ಸಹಯೋಗದೊಂದಿಗೆ ತೊಕ್ಕೊಟ್ಟಿನಲ್ಲಿ ನಡೆದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಉತ್ತಮ ಆರೋಗ್ಯಕ್ಕೆ ರಕ್ತದಾನ ಪೂರಕವಾಗಿದ್ದು, ಪುರುಷರು ವರ್ಷಕ್ಕೆ ನಾಲ್ಕು ಬಾರಿ ಮತ್ತು ಮಹಿಳೆಯರು ಎರಡು ಬಾರಿ ರಕ್ತ ನೀಡಿದರೆ ಉತ್ತಮ. ರಕ್ತದಾನದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕಾಗಿದ್ದು, ರಕ್ತದಾನ ನೀಡಿದವರ ಆರೋಗ್ಯ ಉತ್ತಮವಾಗಿರುತ್ತದೆ ಎಂದು ಸುರೇಶ್ ಬಲ್ಲಾಳ್ ಹೇಳಿದರು. 

ಕಾರ್ಯಕ್ರಮದಲ್ಲಿ ಹೋಂ ಗಾರ್ಡ್ಸ್ ಕಮಾಂಡೆಂಡ್ ಡಾ. ಮುರಲಿ ಮೋಹನ್ ಚೂಂತಾರ್, ಮಾನವ ಹಕ್ಕುಗಳ ಸಮಿತಿ ರಾಜ್ಯಾಧ್ಯಕ್ಷ ಜೋಜೋ ಜೋಸೆಫ್, ಪತ್ರಕರ್ತ ವಿದ್ಯಾಧರ್ ಶೆಟ್ಟಿ, ದ.ಕ. ಮಾನವ ಹಕ್ಕುಗಳ ಸಮಿತಿಯ ಅಧ್ಯಕ್ಷ ಎಚ್.ಇಸ್ಮಾಯೀಲ್ ಶಾಫಿ ಬಬ್ಬುಕಟ್ಟೆ, ಉಪಾಧ್ಯಕ್ಷ ಅನ್ವರ್ ಹುಸೈನ್ ಕೆ.ಪಿ., ಮಾನವ ಹಕ್ಕುಗಳ ಸಮಿತಿ ಮಂಗಳೂರು ವಿಧಾನಸಭಾ ಕ್ಷೇತ್ರ ಅಧ್ಯಕ್ಷ ನೌಷಾದ್ ಕೋಟೆಪುರ, ಉಪಾಧ್ಯಕ್ಷ ತೌಸೀಫ್ ಕೋಟೆಪುರ, ಕಾನೂನು ಸಲಹೆಗಾರ ರಾಘವೇಂದ್ರ ರಾವ್, ಅನ್ವರ್ ಹುಸೈನ್ ಉಪಸ್ಥಿತರಿದ್ದರು.

ಈ ಸಂದರ್ಭ ಉಳ್ಳಾಲ ಠಾಣೆಗೆ 3 ಬ್ಯಾರಿಕೇಡ್, ವಿಕಲಚೇನರೊಬ್ಬರಿಗೆ ಗಾಲಿಕುರ್ಚಿ ಮತ್ತು ಆರ್ಥೋಪೆಡಿಕ್ ಬೆಡ್ ಹಸ್ತಾಂತರಿಸಲಾಯಿತು.

ಫಹಾದ್ ಸ್ವಾಗತಿಸಿದರು. ಅಬ್ದುಲ್ ಸತ್ತಾರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News