×
Ad

ಶೇ.23 ಜನ್‌ಧನ್ ಖಾತೆ ಖಾಲಿ

Update: 2016-12-11 19:06 IST

ಹೊಸದಿಲ್ಲಿ, ಡಿ.11: ನೋಟು ನಿಷೇಧದ ಬಳಿಕ ಜನ್‌ಧನ್ ಖಾತೆಗಳಲ್ಲಿ ಒಟ್ಟು ಠೇವಣಿ ಭಾರೀ ಹೆಚ್ಚಾಗಿರುವ ಹೊರತಾಗಿಯೂ, ಸುಮಾರು ಐದನೆ ಒಂದರಷ್ಟು ಖಾತೆಗಳಲ್ಲಿ ಈಗಲೂ ಯಾವುದೇ ಹೊಸ ಠೇವಣಿಯಾಗಿಲ್ಲ. ಡಿ.7ಕ್ಕೆ ಅಂತ್ಯವಾದ ವಾರದಲ್ಲಿ 25.8 ಕೋಟಿ ಜನ್‌ಧನ್ ಖಾತೆಗಳಿಗೆ ಸೇರಿರುವ ನಿವ್ವಳ ಮೊತತಿ ರೂ. 288 ಕೋಟಿಯಾಗಿದೆ. ಈ ಮೂಲಕ ಜನ್‌ಧನ್ ಖಾತೆಗಳಿಗೆ ಠೇವಣಿಯಾಗಿರುವ ಒಟ್ಟು ಮೊತತಿ ಸುಮಾರು ರೂ. 74,610 ಕೋಟಿಯಾಗಿದೆ.
ನ.8ರಂದು ದೊಡ್ಡ ನೋಟುಗಳು ರದ್ದಾದ ಬಳಿಕ 30 ದಿನಗಳಲ್ಲಿ ಜನ್‌ಧನ್ ಖಾತೆಗಳಿಗೆ ಒಟ್ಟು ರೂ. 29,000 ಕೋಟಿ ಜಮಾ ಆಗಿದ್ದರೂ, ಶೇ.22.9ರಷ್ಟು ಖಾತೆಗಳು ಶೂನ್ಯ ಶಿಲ್ಕಿನವಾಗಿಯೇ ಉಳಿದಿವೆ.
ಮೊದಲು ಏರಿಕೆ ಕಂಡಿದ್ದ ಜನ್‌ಧನ್ ಠೇವಣಿ ಬಳಿಕ ವಾರದಿಂದ ವಾರಕ್ಕೆ ಇಳಿಕೆಯಾಗುತತಿ ಬಂದಿದೆ. ನ.30ಕ್ಕೆ ಕೊನೆಗೊಂಡ ವಾರದಲ್ಲಿ ರೂ. 1,487 ಕೋಟಿ ಈ ಖಾತೆಗಳಲ್ಲಿ ಜಮೆಯಾಗಿತುತಿ. ಹಿಂದಿನ ವಾರದಲ್ಲಿ ಈ ಮೊತತಿ ರೂ. 8,283 ಕೋಟಿಗಳಿಗೆ ಏರಿದೆ.
ನೋಟು ರದ್ದತಿಯ ಬಳಿಕದ ಒಂದು ವಾರದಲ್ಲಿ ಜನ್‌ಧನ್ ಠೇವಣಿಯು ರೂ. 18,615.54 ಕೋಟಿಗೆ ಏರಿದ್ದರೆ, ನ.17-23ರ ನಡುವಿನ 7 ದಿನಗಳಲ್ಲಿ ಈ ಪ್ರಮಾಣ ಅರ್ಧದಷ್ಟಕ್ಕಿಳಿದು ರೂ. 8,582.57 ಕೋಟಿಯಷ್ಟೇ ಹರಿದು ಬಂದಿತುತಿ. ಡಿ.7ಕ್ಕೆ 25.8 ಕೋಟಿ ಜನ್‌ಧನ್ ಖಾತೆಗಳಲ್ಲಿ ಒಟ್ಟು ರೂ. 74,609.50 ಕೋಟಿ ಮೊತತಿವಿತುತಿ ಎಂದು ವಿತತಿ ಸಚಿವಾಲಯದ ಮಾಹಿತಿ ತಿಳಿಸಿದೆ. ಜನ್‌ಧನ್ ಖಾತೆಯಲ್ಲಿ ಠೇವಣಿಗಿರುವ ಮೇಲ್ಮಿತಿ ರೂ. 50 ಸಾವಿರ ಮಾತ್ರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News