ಸಾವ್ಯ: ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನೆ

Update: 2016-12-11 16:59 GMT

ಬೆಳ್ತಂಗಡಿ, ಡಿ.11 : ಅನುದಾನಿತ ಎಸ್.ಎನ್. ಮೂಡಬಿದ್ರಿ ಪಾಲಿಟೆಕ್ನಿಕ್ ಕಾಲೇಜು ವತಿಯಿಂದ ಸಾವ್ಯ ಸರ್ಕಾರಿ ಉ.ಹಿ.ಪ್ರಾ. ಶಾಲೆಯಲ್ಲಿ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನೆ ನಡೆಯಿತು.

ಜಿ.ಪಂ. ಸದಸ್ಯ ಧರಣೇಂದ್ರ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಡಬಿದಿರೆ ಎಸ್‌ಎನ್‌ಎಮ್ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಜೆ.ಜೆ. ಪಿಂಟೋ ವಹಿಸಿದ್ದರು.

ಅಂಡಿಂಜೆ ಗ್ರಾ.ಪಂ. ಅಧ್ಯಕ್ಷ ಮೋಹನ ಅಂಡಿಂಜೆ, ಸದಸ್ಯರಾದ ವಿಠಲ ಸಿ. ಪೂಜಾರಿ, ನಿರ್ಮಲ ಎಸ್. ಶಾಂತಪ್ಪ, ಅಂಡಿಂಜೆ ಕ್ಲಸ್ಟರ್‌ನ ಸಿಆರ್‌ಪಿ ಸೇವಂತಿ, ಸಾವ್ಯ ಸ.ಹಿ.ಪ್ರಾ. ಶಾಲಾ ಮುಖ್ಯ ಶಿಕ್ಷಕ ಬಿ. ಅಬೂಬಕ್ಕರ್, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಲೋಕಯ್ಯ ಪೂಜಾರಿ, ಸಾವ್ಯ ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಯರಾಜ ಹೆಗ್ಡೆ, ಶಾಲಾ ನೂತನ ಧ್ವಜಸ್ತಂಭದ ದಾನಿ ರಾಜೇಶ್, ಸಾವ್ಯ ಅಯ್ಯಪ್ಪ ಸ್ವಾಮಿ ಭಜನಾ ಸಮಿತಿ ಅಧ್ಯಕ್ಷ ಶ್ರೀಧರ ಪೂಜಾರಿ, ಎನ್‌ಎಸ್‌ಎಸ್ ನಾಯಕರಾದ ಸತೀಶ್, ರಮ್ಯಾ, ದೀಕ್ಷಿತ್, ನಿಶ್ರಿತಾ ಉಪಸ್ಥಿತರಿದ್ದರು.

ಶಿಬಿರಾಧಿಕಾರಿ ಕುಮಾರೇಶ್ ರಾಥೋಡ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಶಿಬಿರಾಧಿಕಾರಿ ರಾಮ್‌ಪ್ರಸಾದ್ ಸ್ವಾಗತಿಸಿ ಶಿಬಿರಾರ್ಥಿ ಅಮಿತ್ ರಾಜ್ ವಂದಿಸಿದರು.

ಮೇಘಾಶ್ರೀ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News