×
Ad

ಉಳ್ಳಾಲ ಸಿಟಿ ಪಂಚಾಯತ್ ಗ್ರೌಂಡ್ ನಲ್ಲಿ ಕುರ್ಆನ್ ಸಂದೇಶಗಳ ಪ್ರದರ್ಶನ

Update: 2016-12-11 23:13 IST

ಉಳ್ಳಾಲ, ಡಿ.11 : ಸೌತ್ ಕರ್ನಾಟಕ ಸಲಫಿ ಮೂವ್ ಮೆಂಟ್ ಮಂಗಳೂರು  ವತಿಯಿಂದ ಕುರ್ಆನ್ ಸಂದೇಶಗಳ ಪ್ಯಾನಲ್ ಪ್ರದರ್ಶನವು ಉಳ್ಳಾಲ ಸಿಟಿ ಪಂಚಾಯತ್ ಗ್ರೌಂಡ್ ನಲ್ಲಿ ಯಶಸ್ವಿಯಾಗಿ ನಡೆಯಿತು. 

ವಿವಿಧ ಧರ್ಮದ ಸ್ತೀ ಪುರುಷರು ಪ್ರದರ್ಶನವನ್ನು ವೀಕ್ಷಿಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಉಳ್ಳಾಲ ನಗರ ಸಭೆ ಅಧ್ಯಕ್ಷ ಕೆ.ಹುಸೈನ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ದಲಿತ ಸಂಘರ್ಷ ಸಮಿತಿ ಮುಖಂಡ ಶಿವಪ್ಪ ಅಟ್ಟೋಲೆ, ಉಳ್ಳಾಲ ನಗರ ಸಭೆ ಸದಸ್ಯಮುಸ್ತಫ,  ಮುಹಮ್ಮದ್ ಹನೀಫ್ ವಕೀಲರು, ಎಸ್ಕೆಎಸ್ಸೆಮ್ ಅಧ್ಯಕ್ಷ ಯು.ಎನ್ ಅಬ್ದರ್ರಝ್ಝಾಕ್ ಹಾಜಿ,  ಪ್ರಧಾನ ಕಾರ್ಯದರ್ಶಿ  ಬಶೀರ್ ಶಾಲಿಮಾರ್ ಮತ್ತಿತರರು ಉಪಸ್ಥಿತರಿದ್ದರು.

 ಎಮ್.ಜಿ ಮುಹಮ್ಮದರು ಪ್ಯಾನಲ್ ನಲ್ಲಿ ಪ್ರದರ್ಶಿಸಲಾದ ವಿಷಯಗಳನ್ನು ವಿವರಿಸಿದರು.

 ಶರೀಫ್ ಮುಲ್ಕಿ ಸ್ವಾಗತಿಸಿದರು .

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News