ಬಂಟ್ವಾಳ : ಚರ್ಚ್‌ನ ವಾರ್ಷಿಕ ಪರಮ ಪ್ರಸಾದದ ಮೆರವಣಿಗೆ
Update: 2016-12-11 23:32 IST
ಬಂಟ್ವಾಳ , ಡಿ.11 : ತಾಲೂಕಿನ ಲೊರೆಟ್ಟೋ ಮಾತಾ ಚರ್ಚ್‌ನ ವಾರ್ಷಿಕ ಪರಮ ಪ್ರಸಾದದ ಮೆರವಣಿಗೆ ತೆರೆದ ವಾಹನದಲ್ಲಿ ನಡೆಯಿತು.
ನೂರಾರು ಭಕ್ತಾದಿಗಳು ಭಕ್ತಿ, ಶಿಸ್ತಿನಿಂದ ಪಾಲ್ಗೊಂಡಿದ್ದು ಬೆಳಿಗ್ಗಿನ ಬಲಿಪೂಜೆಯೊಂದಿಗೆ ಆರಂಭವಾದ ಧಾರ್ಮಿಕ ಕಾರ್ಯಕ್ರಮವು ಬ್ಯಾಂಡ್, ವಾದ್ಯ, ಪಟಾಕಿಗಳ ಸಹಕಾರದೊಂದಿಗೆ ವಿಜೃಂಭಣೆಯಿಂದ ನಡೆಯಿತು.
ಪ್ರಧಾನ ಧರ್ಮಗುರುಗಳಾದ ಪ್ರಸ್ತುತ ಮಂಗಳೂರಿನ ಸಂತ ಜೋಸೆಫರ ಸೆಮಿನರಿಯ ಪ್ರೊಫೆಸರಾಗಿರುವ ವಂದನಿಯ ಬೊನಿಫಸ್ ಪಿಂಟೋ, ಚರ್ಚ್ ಧರ್ಮಗುರು ವಂದನೀಯ ಎಲಿಯಸ್ ಡಿಸೋಜ ಬಲಿ ಪೂಜೆಯನ್ನು ಅರ್ಪಿಸಿದರು.