ಭಾಷೆಗಳು ಪರಸ್ಪರ ಆಶಯಗಳ ವಿನಿಮಯಕ್ಕೆ ಪೂರಕ: ಸಚಿವ ಚಂದ್ರಶೇಖರನ್

Update: 2016-12-11 18:33 GMT

ಕಾಸರಗೋಡು, ಡಿ.11: ಬದಿಯಡ್ಕದಲ್ಲಿ ನಡೆಯುತ್ತಿರುವ ವಿಶ್ವ ತುಳುವೆರೆ ಆಯನೊದ ಮೂರನೆ ದಿನವಾದ ರವಿವಾರ ಸಂಭ್ರಮದ ಮೆರವಣಿಗೆ ನಡೆಯಿತು.

ಬದಿಯಡ್ಕ ನವಜೀವನ ಶಾಲಾ ಪರಿಸರದಿಂದ ಹೊರಟ ಮೆರವಣಿಗೆ ಬದಿಯಡ್ಕ ಪೇಟೆಯ ಮೂಲಕ ಸಾಗಿ ಸಮಾವೇಶ ನಗರವಾದ ಬದಿಯಡ್ಕ ಬೋಳುಕಟ್ಟೆಯ ಕ್ರೀಡಾಂಗಣದಲ್ಲಿ ಸಂಗಮಿಸಿತು.

 ಶುಕ್ರವಾರ ಬದಿಯಡ್ಕ ನಾಗಬೆಮ್ಮೆರೆ ಪದವಿನ ತುಳುವೇಶ್ವರ ಚಾವಡಿಯಲ್ಲಿ ಆರಂಭಗೊಂಡ ಸಮ್ಮೇಳನಕ್ಕೆ ರವಿವಾರ ಸಂಭ್ರಮದ ಮೆರವಣಿಗೆಯೊಂದಿಗೆ ಔಪಚಾರಿಕವಾಗಿ ಉದ್ಘಾಟನೆಗೊಂಡಿತು.

ಬಳಿಕ ನಡೆದ ಸಭಾಕಾರ್ಯಕ್ರಮವನ್ನು ಕೇರಳ ಕಂದಾಯ ಸಚಿವ ಇ.ಚಂದ್ರಶೇಖರನ್ ಉದ್ಘಾಟಿಸಿ ಮಾತನಾಡಿದ ಅವರು, ಭಾಷೆ ಮುಖ್ಯವಲ್ಲ ನಾವೆಲ್ಲಾ ಒಂದೇ ಎಂಬುದನ್ನು ಮನಗಾಣಬೇಕು. ಎಲ್ಲ ಭಾಷೆಗಳು ಪರಸ್ಪರ ಆಶಯಗಳ ವಿನಿಮಯಕ್ಕೆ ಪೂರಕ ಎಂದು ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿಯಾಗಿ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಮಾತನಾಡಿದರು. ತುಳುವೆರೆ ಅಯನೊ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. 

ಕಣ್ಣೂರಿನ ಡಾ.ಶ್ರೀಧರನ್‌ರವರ ತುಳುಭಾಷೆ ಕೋಶ ನಿಘಂಟನ್ನು ಪಿ.ವಿ.ಕೆ ಪನಯಾಲ್ ಅವರಿಗೆ ನೀಡುವ ಮೂಲಕ ಆಸ್ಕರ್ ಫೆರ್ನಾಂಡಿಸ್ ಬಿಡುಗಡೆಗೊಳಿಸಿದರು. ತುಳು ಲಿಪಿಯ ಕ್ಯಾಲೆಂಡರ್‌ನ್ನು ಸಚಿವ ಇ.ಚಂದ್ರಶೇಖರನ್ ಬಿಡುಗಡೆಗೊಳಿಸಿದರು ವಸಂತ ಶೆಟ್ಟಿ ಬೆಳ್ಳಾರೆ, ಎಲ್.ವಿ ಅಮೀನ್, ಉಸ್ಮಾನ್ ಹಯಾತ್ ಅವರನ್ನು ಸನ್ಮಾನಿಸಲಾಯಿತು.

ಕಾಸರಗೋಡು ಶಾಸಕ ಎನ್.ಎ ನೆಲ್ಲಿಕುನ್ನು, ಕರ್ನಾಟಕ ತುಳು ಅಕಾಡಮಿ ಅಧ್ಯಕ್ಷೆ ಜಾನಕಿ ಬ್ರಹ್ಮಾವರ, ಕೇರಳ ತುಳು ಅಕಾಡಮಿ ಅಧ್ಯಕ್ಷ ಬಿ.ಕನ್ಯಾನ ಬಾಳೆಕೋಡಿ ಶಿಲಾಂಜನ ಕ್ಷೇತ್ರದ ಮಣಿಕಾಂತ ಸ್ವಾಮೀಜಿ, ಸುಬ್ಬಯ್ಯ ರೈ, ಧರ್ಮಪಾಲ ದೇವಾಡಿಗ, ವಸಂತ ಶೆಟ್ಟಿ ಬೆಳ್ಳಾರೆ, ಎ.ಸಿ ಭಂಡಾರಿ, ತೋನ್ಸೆ ಜಯಕೃಷ್ಣ ಶೆಟ್ಟಿ, ಶಶಿಧರ ಶೆಟ್ಟಿ, ಫ್ರಾಂಕ್ ಫೆರ್ನಾಂಡಿಸ್, ರಾಜ್‌ಕುಮಾರ್ ಚಂದ್ರಹಾಸ ರೈ, ಶಮೀನಾ ಆಳ್ವ, ರಾಜೇಶ್ ಆಳ್ವ, ಉಷಾ ಹೆಗ್ಡೆ, ಸುಮತಿ ಶೆಟ್ಟಿ, ಎ.ಶ್ರೀನಾಥ್, ಶ್ಯಾಮ್ ಪ್ರಸಾದ್, ರಾಜೇಂದ್ರ ರೈ, ಸುಬ್ರಾಯ ಅಡೂರು ಮತ್ತಿತರರು ಉಪಸ್ಥಿತರಿದ್ದರು.

   13ರಂದು ವಿಶ್ವ ತುಳುವೆರೆ ಆಯನೊ ಕೊನೆಗೊಳ್ಳಲಿದೆ. ಐದು ದಿನಗಳ ಕಾಲ ಐದು ವೇದಿಕೆಗಳಲ್ಲಿ ತುಳು ನಾಡಿನ ದೈವಾರಾಧನೆ ನಿನ್ನೆ, ಇಂದು, ನಾಳೆ, ಜನಮೈತ್ರಿ ಸಂಗಮ, ತುಳು ಸಾಹಿತ್ಯ ಸಮ್ಮೇಳನ, ತುಳುನಾಡು ಗೊಬ್ಬುಲು ಅಲ್ಲದೆ ರಾಷ್ಟ್ರೀಯ ಜಾನಪದ ಉತ್ಸವ, ಹಲವು ಗೋಷ್ಠಿಗಳು , ಜಾನಪದ ಸಾಂಸ್ಕೃ ತಿಕ ಪ್ರದರ್ಶನ, ಗುಡಿ ಕೈಗಾರಿಕಾ, ಪುಸ್ತಕ ಪ್ರದರ್ಶನ, ಜಾನಪದ ಕ್ರೀಡೆಗಳನ್ನು ಆಯೋಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News