‘ಮನೆಗೊಂದು ಮರ’ ಅಭಿಯಾನಕ್ಕೆ ಚಾಲನೆ

Update: 2016-12-12 15:54 GMT

ಮಂಗಳೂರು, ಡಿ.12: ಪರಿಸರ ಪ್ರೇಮಿ, ಸಹ್ಯಾದ್ರಿ ಸಂಚಯದ ಸದಸ್ಯ ಮಾಧವ ಉಳ್ಳಾಲ್ ಹಮ್ಮಿಕೊಂಡ ‘ಮನೆಗೊಂದು ಮರ’ ಎಂಬ ನೂತನ ಹಸಿರು ಅಭಿಯಾನಕ್ಕೆ ನಗರದ ಕದ್ರಿಕಂಬಳಗುತ್ತು ನವನೀತ್ ಶೆಟ್ಟಿಯ ಮನೆಯ ವಠಾರದಲ್ಲಿ ಸೋಮವಾರ ಚಾಲನೆ ನೀಡಲಾಯಿತು.
ನಗರದಲ್ಲಿ ಹೆಚ್ಚುತ್ತಿರುವ ತಾಪಮಾನ, ಕಾಂಕ್ರಿಟೀಕರಗಳಿಂದ ಕಾಡು ನಾಶವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿ ಮನೆಗೊಂದು ಮರ ಬೆಳೆಸುವ ಚಿಂತನೆ ಹಮ್ಮಿಕೊಂಡಿದ್ದು ಮುಂದಿನ 60 ವಾರಗಳಲ್ಲಿ ಈ ಅಭಿಯಾನವನ್ನು ಮಾಧವ ಉಳ್ಳಾಲ್ ನಡೆಸಲಿದ್ದಾರೆ.

 ಮಂಗಳೂರು ವಲಯ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್ ಅಭಿಯಾನಕ್ಕೆ ಚಾಲನೆ ನೀಡಿದರು.

ಈ ಸಂದರ್ಭ ಭಾರತೀಯ ಸೇವಾದಳದ ಅಧ್ಯಕ್ಷ ಪ್ರಭಾಕರ್ ಶ್ರೀಯಾನ್, ಉದ್ಯಮಿ ಸುಂದರ್ ಉಳ್ಳಾಲ್, ಸಂಜೀವ, ಡಾ. ಮುರಲಿ ಮೋಹನ್ ಚೂಂತಾರ್, ವಕೀಲೆ ಅರುಣಾ, ಸಹ್ಯಾದ್ರಿ ಸಂಚಯದ ದಿನೇಶ್ ಹೊಳ್ಳ, ಹರೀಶ್ ಅಡ್ಯಾರ್, ದಿನೇಶ್ ಕೊಡಿಯಾಲಬೈಲ್, ರಾಜೇಶ್ ದೇವಾಡಿಗ, ಯತೀಶ್ ಸಾಲಿಯಾನ್, ದಿನೇಶ್ ಸಾಲಿಯಾನ್, ಟೀಮ್ ಮಂಗಳೂರು ತಂಡದ ಸರ್ವೇಶ್ ರಾವ್ ಉಪಸ್ಥಿತರಿದ್ದರು.

ಪರಿಸರ ಹೋರಾಟಗಾರ ಶಶಿಧರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News