18 ವರ್ಷಗಳ ಬಳಿಕ ಮತ್ತೆ ಹಾಡಿದರು ಆಮಿರ್!

Update: 2016-12-13 06:19 GMT

ಮುಂಬೈ, ಡಿ.13: ಗುಲಾಂ ಚಿತ್ರದ ಜನಪ್ರಿಯ ಹಾಡು ‘ಆತಿ ಕ್ಯಾ ಖಂಡಾಲ’ ನಂತರ ಬಾಲಿವುಡ್ಡಿನ ಖ್ಯಾತ ನಟ ಆಮಿರ್ ಖಾನ್ ಇನ್ನೊಂದು ಹಾಡು 'ಧಾಕಡ್' ಅನ್ನು ತಮ್ಮ ಮುಂಬರುವ ಬಹುನಿರೀಕ್ಷಿತ ಚಿತ್ರ 'ದಂಗಲ್'ಗೆ ರೆಕಾರ್ಡ್ ಮಾಡಿದ್ದಾರೆ.

ಈ ಹಾಡಿನ ವೀಡಿಯೊವನ್ನು ಪ್ರಥಮ ಬಾರಿಗೆ ಲಕ್ಸ್ ಗೋಲ್ಡನ್ ರೋಸ್ ಅವಾರ್ಡ್ಸ್ ಸಮಾರಂಭದಲ್ಲಿ ಪ್ರದರ್ಶಿಸಲಾಗುವುದು ಹಾಗೂ ಈ ಕಾರ್ಯಕ್ರಮ ಝೀ ಚಾನೆಲ್ ನಲ್ಲಿ ಡಿಸೆಂಬರ್ 18ರಂದು ಪ್ರಸಾರವಾಗಲಿದೆ.
ಧಾಕಡ್ ಹಾಡು ಮಹಿಳಾ ಸಬಲೀಕರಣದ ವಿಚಾರ ಹೇಳುತ್ತದೆ ಹಾಗೂ ಈ ಹಾಡಿನ ನಿರ್ಮಾಪಕರು ಅದನ್ನು ಭಾರತದ ಪುತ್ರಿಯರಿಗೆ ಸಮರ್ಪಿಸಿದ್ದಾರೆ.

ಆಮಿರ್ ಅವರಿಗೆ ಲಕ್ಸ್‌ ಅವಾರ್ಡ್ಸ್ ಸಮಾರಂಭದಲ್ಲಿ ಮಹಿಳೆಯರ ಸಾಧನೆಯನ್ನು ಗೌರವಿಸಲಾಗುವುದೆಂದು ತಿಳಿದು ಬಂದಾಗ ತಾವು ಕೂಡ ಏನನ್ನಾದರೂ ಕೊಡುಗೆ ನೀಡಬೇಕೆಂದು ನಿರ್ಧರಿಸಿ ತಮ್ಮ ಧಾಟಿಯಲ್ಲಿ ಮಹಿಳೆಯರನ್ನು ಪ್ರಶಂಸಿಸುವ ಧಾಕಡ್ ಹಾಡನ್ನು ತಮ್ಮ ದನಿಯಲ್ಲಿಯೇ ರೆಕಾರ್ಡ್ ಮಾಡಿದರಲ್ಲದೆ ತನ್ನ ಪರದೆಯ ಮೇಲಿನ ಪುತ್ರಿಯರಾದ ಫಾತಿಮಾ ಸನಾ ಶೇಖ್ ಮತ್ತು ಸನ್ಯ ಮಲ್ಹೋತ್ರ ಅವರನ್ನು ಪರಿಚಯಿಸುತ್ತಾರೆ.

ಈ ಹಾಡಿಗಾಗಿನ ವಿಶೇಷ ವೀಡಿಯೊದಲ್ಲಿ 51 ವರ್ಷದ ಆಮಿರ್ ರ್ಯಾಪ್ಪರ್‌ ರೀತಿಯಲ್ಲಿ ಧಿರಿಸು ಧರಿಸಿದ್ದಾರೆ. ಲಕ್ಸ್ ಪ್ರಶಸ್ತಿ ಸಮಾರಂಭದ ಆಂಕರ್ ಅರ್ಜುನ್ ಕಪೂರ್, ಸೂಪರ್ ಸ್ಟಾರ್ ಶಾರುಖ್ ಖಾನ್, ಚಿತ್ರ ನಿರ್ದೇಶಕ ಕರಣ್ ಜೋಹರ್ ಈ ವೀಡಿಯೊ ಬಿಡುಗಡೆಗೊಳಿಸಲಿದ್ದಾರೆ.
ಆಮಿರ್ ಈ ಹಿಂದಿನ ಚಿತ್ರಗಳಾದ ಗುಲಾಮ್ (ಆತಿ ಕ್ಯಾ ಖಂಡಾಲ), ಸರ್ಫರೋಷ್ (ಇಸ್ ದೀವಾನೆ ಲಡ್ಕೆ ಕೋ) ಚಿತ್ರದ ಹಾಡುಗಳಿಗೆ ಕಂಠದಾನ ಮಾಡಿದ್ದರೆ,ಫನಾ ಚಿತ್ರದ ಚಂದಾ ಚಮ್ಕೇ ಹಾಡಿನ ಕೆಲಸಾಲುಗಳಿಗೂ ಹಾಡಿದ್ದಾರೆ. ಆದರೆಇಡೀ ಹಾಡನ್ನು ಆಮಿರ್ ತಾವೇ ಹಾಡಿರುವುದು ಇದೇ ಪ್ರಥಮವಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News