×
Ad

ಉಡುಪಿ ಜಿಲ್ಲೆಯ ಪ್ರಥಮ ಡಿಜಿಟಲ್ ಗ್ರಾಮವಾಗಿ ಆಯ್ಕೆಯಾದ ಗ್ರಾಮ ಯಾವುದು ?

Update: 2016-12-13 19:10 IST

ಪಡುಬಿದ್ರಿ, ಡಿ.13 : ಕುತ್ಯಾರು ಗ್ರಾಮಸ್ಥರಿಗೆ ವಿಜಯ ಬ್ಯಾಂಕ್ ವತಿಯಿಂದ ಸೋಮವಾರ ಜರಗಿದ ಡಿಜಿಟಲ್ ಬ್ಯಾಂಕಿಂಗ್ ಮಾಹಿತಿ ಕಾರ್ಯಾಗಾರದಲ್ಲಿ ಕುತ್ಯಾರು ಗ್ರಾಮವನ್ನು ಜಿಲ್ಲೆಯ ಪ್ರಥಮ ಡಿಜಿಟಲ್ ಗ್ರಾಮ ಎಂದು ಘೋಷಿಸಲಾಯಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ವಿಜಯಾ ಬ್ಯಾಂಕ್ ರೀಜನಲ್ ಮೆನೇಜರ್ ಎಮ್.ಜೆ. ನಾಗರಾಜ್,  ಮೊದಲನೆಯ ಸುತ್ತಿನಲ್ಲಿ ಆಯ್ಕೆಯಾದ ಜಿಲ್ಲೆಯ 8 ಗ್ರಾಮಗಳಲ್ಲಿ ಮುದಲನೆಯದಾಗಿ ಚಾಲನೆ ನೀಡಿದ ಕುತ್ಯಾರು ಗ್ರಾಮವು ಪ್ರಥಮ ಡಿಜಿಟಲ್ ಗ್ರಾಮವಾಗಲಿ ಎಂಬುದು ನನ್ನ ಆಶಯ. ಪ್ರತಿ ಕುಟುಂಬದ ಒಬ್ಬೊಬ್ಬರೂ ಬ್ಯಾಂಕ್ ಖಾತೆ ತೆರೆದು, ಸಾಮಾನ್ಯ ಮೊಬೈಲ್ ಬಳಸಿ ಬರಹ ಸಂದೇಶದ ಮೂಲಕ ವಹಿವಾಟು ಮಾಡಿದರೆ ಕಾರ್ಯಕ್ರಮ ಸಂಪೂರ್ಣ ಯಸಸ್ವೀಯಾಗಿ ದೇಶವು ಊಹಿಸಲಾಗದ ಎತ್ತರಕ್ಕೆ ಬೆಳೆಯಲು ಸಾಧ್ಯ ಎಂದರು. ಸಮಾಜದ ಪ್ರತಿ ವರ್ಗದವರೂ ಯಾರ ಸಹಾಯವೂ ಇಲ್ಲದೆ ವ್ಯವಹಾರ ಜ್ನಾನ ಪಡೆಯುವಂತಾಗಬೇಕು. ಕೈಯಲ್ಲಿ ಕಾಸಿಲ್ಲದೆಯೂ ವ್ಯವಹಾರ ನಡೆಸಿ ನಮ್ಮ ಲಾಭಕ್ಕೆ ಹೇಗೆ ಬಳಸಿಕೊಳ್ಳಬಹುದೆಂದು ತಿಳಿಸಿದರು.

ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಕೇಂಜ ಶ್ರೀಧರ ತಂತ್ರಿ, ಕುತ್ಯಾರ್ ಗ್ರಾಮ ಪಂಚಾಯ್ತಿ ಅಧ್ಯಕ್ಷ ಧೀರಜ್ ಶೆಟ್ಟಿ, ಕುತ್ಯಾರು ಹಾಲು ಉತ್ಪಾದಕರ ಸಂಘ ಅಧ್ಯಕ್ಷೆ ವೀಣಾ ಭಟ್, ವಿಜಯಾ ಬ್ಯಾಂಕ್ ಕುತ್ಯಾರ್ ಶಾಖಾ ಪ್ರಬಂಧಕ ರಾಣೇಶ್ ಶೆಟ್ಟಿ ಹಾಗೂ
ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಕೇಂಜ ಶ್ರೀಧರ ತಂತ್ರಿ ಮಾತನಾಡಿ, ಆನ್‌ಲೈನ್ ಯುಗದಲ್ಲಿ ಮೊಬೈಲ್ ಬಳಕೆಗೆ ಹೆಚ್ಚಾಗಿ ತಮ್ಮನ್ನು ತೊಡಗಿಸಿಕೊಳ್ಳುವ ಶಾಲಾ ಮಕ್ಕಳನ್ನು ಗುರಿಯಾಗಿಸಿಕೊಂಡು ಮುಂದಿನ ದಿನಗಳಲ್ಲಿ ವಿಶೇಷ ಮಾಹಿತಿ ಕಾರ್ಯಾಗಾರ ಆಯೋಜಿಸಿ, ಗ್ರಾಮದ ಪ್ರತಿಯೋರ್ವನೂ ಡಿಜಿಟಲೈಸೇಷನ್ ಮೊಬೈಲ್ ಬ್ಯಾಂಕಿಂಗ್ ವಹಿವಾಟಿಗೆ ಒಗ್ಗಿಸಿಕೊಳ್ಳುವಂತಾಗಬೇಕು ಎಂದರು.
ಆನ್‌ಲೈನ್ ಪರ್ಸ್‌ಗಳ ಯುಗಕ್ಕೆ ಸುಲಭ ಹಾಗೂ ಸುರಕ್ಷಿತವಾದ ಇ ವ್ಯಾಲೆಟ್ ಪದ್ಧತಿಯನ್ನು ಬಳಸುವ ಎಲ್ಲಾ ಮಾಹಿತಿಗಳನ್ನು ಪರಿಣತರ ಮೂಲಕ ಗ್ರಾಮಸ್ಥರಿಗೆ ಈ ಕಾರ್ಯಕ್ರಮದಲ್ಲಿ ತಿಳಿಸಲಾಯಿತು.
  ಸೌಲಭ್ಯಗಳು:

ಬ್ಯಾಂಕ್ ಖಾತೆದಾರರಿಗೆ ಉಚಿತ ವೈಫೈ ಸೌಲಭ್ಯ, ವ್ಯವಹಾರಸ್ಥರಿಗೆ ಉಚಿತ ಇಲೆಕ್ಟ್ರಾನಿಕ್ ಪಾವತಿ ಯಂತ್ರ, ಪಾಸ್‌ವರ್ಡ್ ಗೌಪ್ಯತೆ ಕಾಪಾಡಲು ಮನವಿ, ಸಾಮಾನ್ಯ ಮೊಬೈಲ್ ಬಳಸಿ ಬರಹ ಸಂದೇಶದ ಮೂಲಕ ವಹಿವಾಟು ಸೌಲಭ್ಯ.

ಉದ್ಯಮಿ ಕುತ್ಯಾರ್ ಪ್ರಸಾದ್ ಶೆಟ್ಟಿ ಪ್ರಾಸಾವಿಕವಾಗಿ ಮಾತನಾಡಿದರು , ಶಾಖಾ ಪ್ರಬಂಧಕ ರೀಣೀಶ್ ಶೆಟ್ಟಿ ನಿರೂಪಿಸಿದರು , ಶಿರ್ವ ಶಾಖಾ ಪ್ರಬಂಧಕ ಮೆಲ್ವಿನ್ ಸಿಕ್ವೇರಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News