ಕಾರಿಗೆ ಆಕಸ್ಮಿಕ ಬೆಂಕಿ
Update: 2016-12-13 19:27 IST
ಪಡುಬಿದ್ರಿ, ಡಿ.13 : ಕಾರೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿದ ಕಾರಣ ಕಾರು ಸಂಪೂರ್ಣ ಸುಟ್ಟು ಮನೆಗೆ ಭಾಗಶಃ ಹಾನಿಯುಂಟಾದ ಘಟನೆ ಹೆಜಮಾಡಿಯಲ್ಲಿ ನಡೆದಿದೆ.
ಹೆಜಮಾಡಿ ಕಡವಿನ ಬಾಗಿಲಿನ ರಾಮಕೃಷ್ಣ ಶೆಟ್ಟಿ ಎಂಬವರ ಮನೆಯ ಸ್ಲಾಪಿನ ಕೆಳಗೆ ನಿಲ್ಲಿಸಲಾದ ಹೋಂಡಾ ಎಕ್ಸೆಂಟ್ ಕಾರಿನಲ್ಲಿ ಶಾರ್ಟ್ ಸರ್ಕ್ಯೂಟ್ ಆದ ಪರಿಣಾಮ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ಕಾರು ಸಂಪೂರ್ಣ ಸುಟ್ಟುಹೋಗಿದೆ. ಕಾರಿಗೆ ತಗುಲಿದ್ದ ಬೆಂಕಿ ಮನೆಗೆ ಹರಡಿ ಭಾಗಶಃ ಹಾನಿ ಉಂಟಾಗಿದೆ.
ತಕ್ಷಣ ಪೊಲೀಸರಿಗೆ ಮಾಹಿತಿ ರವಾನಿಸಿ ಅಗ್ನಿ ಶಾಮಕ ದಳದ ನೆರವಿನಿಂದ ಬೆಂಕಿಯನ್ನು ನಂದಿಸಲಾಗಿದೆ. ಅಪಘಾತದ ಪರಿಣಾಮ ಸುಮಾರು 10 ಲಕ್ಷ ರೂಪಾಯಿಷ್ಟು ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.