×
Ad

ರಥೋತ್ಸವದ ಮೂಲಕ ಕಾವ್ಯೋತ್ಸವ : ಭಟ್ಕಳ ಕಸಾಪದಿಂದ ವಿನೋತನ ಕಾರ್ಯಕ್ರಮ

Update: 2016-12-13 19:43 IST

ಭಟ್ಕಳ, ಡಿ. 13 :  ಭಟ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ  ವಿನೂತನ ಸಾಹಿತ್ಯಿಕ ಕಾರ್ಯಕ್ರಮ ಜರಗಿದ್ದು ಇದೊಂದು ಉ.ಕ.ಜಿಲ್ಲೆಯಲ್ಲಿ ವಿಶಿಷ್ಟ ಕಾರ್ಯಕ್ರಮ ಎಂಬ ಖ್ಯಾತಿಗೆ ಪಾತ್ರವಾಗಿದೆ. 

 ಇಲ್ಲಿನ ರಥಬೀದಿಯಲ್ಲಿ ಜರಗಿದ ಶ್ರೀಧರ್ ಪದ್ಮಾವತಿ ದೇವಿಯ ರಥೋತ್ಸದ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗಂಗಾಧರ್ ಸಾಹಿತಿ ಹಾಗೂ ಸಾಹಿತ್ಯ ಪ್ರೇಮಿಗಳನ್ನು ಒಂದೆಡೆ ಸೇರಿಸಿ ಕವಿಗೋಷ್ಠಿಯೊಂದು ಹಮ್ಮಿಕೊಂಡಿದ್ದು , ನಿಜಾರ್ಥದಲ್ಲಿ ಯಶಸ್ವಿಯಾಯಿತು. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಖ್ಯಾತ ಸಾಹಿತಿ ವೈರಸ್ ಶಿರಾಲಿ ವಹಿಸಿ ಮಾತನಾಡಿ, ರಥೋತ್ಸವದ ಮೂಲಕ ಜನರಲ್ಲಿ ಕನ್ನಡ ಪ್ರೇಮವನ್ನು ಬೆಳೆಸುವ ಕಾರ್ಯ ನಡೆಯುತ್ತಿರುವುದು ಶ್ಲಾಘನೀಯ ಎಂದರು.

ಈ ಸಂದರ್ಭದಲ್ಲಿ ಪತ್ರಕರ್ತ ಎಂ.ಆರ್. 'ಎಲ್ಲರೂ ಒಂದೇ ' ಎನ್ನುವ ಕವನ ವಾಚಿಸಿ, ದೇವಪ್ರೇಮದೊಂದಿಗೆ ಕಾವ್ಯಾ ಪ್ರೇಮವನ್ನು ಬೆಳೆಸುತ್ತಿರುವ ಸಾಹಿತ್ಯ ಪರಿಷತ್ ಮುಂದಿನ ದಿನಗಳಲ್ಲಿ ಸಾಹಿತ್ಯಾಸಕ್ತರಿಗೆ ಇದೊಂದು ಮೈಲುಗಲ್ಲಾಗಲಿದೆ ಎಂದರು.

ಮಾನಾಸುತ, ಶ್ರೀಧರ ಶೇಟ್ ಶಿರಾಲಿ, ಎಂ.ಪಿ.ಬಂಢಾರಿ, ರೇಶ್ಮಾ ಉಮೇಶ್, ಪ್ರತಿಮಾ ಗಂಗಾಧರ್, ಸುರೇಶ್ ಮುರ್ಡೇಶ್ವರ ತಮ್ಮ ಕವನ ವಾಚಿಸಿ ಸಾಹಿತ್ಯ ಪ್ರೇಮಿಗಳ ಮನಗೆದ್ದರು.

ವೇದಿಕೆಯಲ್ಲಿ ದೇವಸ್ಥಾನದ ಧರ್ಮದರ್ಶಿಗಳಾದ ರಾಮಾ ನಾಯ್ಕ, ಹಾಗೂ ಪದ್ಮಾವತಿ ನಾಯ್ಕ ದಂಪತಿ, ಉಪನ್ಯಾಸಕ ಗಣೇಶ ಯಾಜಿ ಉಪಸ್ಥಿತರಿದ್ದರು. ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ವಾಗತಿಸಿ ಧನ್ಯವಾದ ಅರ್ಪಿಸಿದರು. ಮಂಜುನಾಥ್ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News