×
Ad

ನೆಹರೂ ಮೈದಾನಕ್ಕೆ ನೌಶಾದ್ ಬಾಖವಿ

Update: 2016-12-13 19:50 IST

ಮಂಗಳೂರು, ಡಿ. 13: ಕರ್ನಾಟಕ ಇಸ್ಲಾಮಿಕ್ ಸಾಹಿತ್ಯ ಅಕಾಡಮಿ ಪ್ರಕಾಶಿತ ಸುನ್ನೀ ಸಂದೇಶ ಮಾಸಿಕದ 15ನೆ ವಾರ್ಷಿಕೋತ್ಸವ ಸಂಭ್ರಮವು ಫೆ. 18ರಂದು ನೆಹರೂ ಮೈದಾನದಲ್ಲಿ ನಡೆಯಲಿದ್ದು, ಧಾರ್ಮಿಕ ಮುಖಂಡ ಎ. ಎಂ. ನೌಶಾದ್ ಬಾಖವಿ ತಿರುವನಂತಪುರ ಪ್ರವಚನ ನೀಡಲಿದ್ದಾರೆ.

ಕಾರ್ಯಕ್ರಮದ ಪೂರ್ವಭಾವಿಯಾಗಿ ಇಂದು ವಾರ್ಷಿಕೋತ್ಸವ ಸಂಭ್ರಮದ ಸ್ವಾಗತ ಸಮಿತಿ ರಚನಾ ಸಭೆ ನಗರದ ಇಂಟರ್‌ಸಿಟಿ ಹೊಟೇಲ್‌ನಲ್ಲಿ ನಡೆಯಿತು. ಕೆ.ಎಸ್.ಹೈದರ್ ದಾರಿಮಿ ಕಲ್ಲಡ್ಕ ಸಭೆಯ ಅಧ್ಯಕ್ಷತೆ ವಹಿಸಿದ್ದರು.
 
ಕೆ. ಎಸ್. ಹೈದರ್ ದಾರಿಮಿ ಕಲ್ಲಡ್ಕ (ರಕ್ಷಣಾಧಿಕಾರಿ) ಝಕರಿಯ್ಯ ಹಾಜಿ ಅಲ್‌ಮುಝೈನ್ ಅಲ್‌ಜುಬೈಲ್ (ಗೌರವಾಧ್ಯಕ್ಷರು), ಎ.ಎಚ್. ನೌಶಾದ್ ಹಾಜಿ ಸೂರಲ್ಪಾಡಿ (ಚೇರ್‌ಮ್ಯಾನ್), ಕೆ. ಎಲ್. ಉಮರ್ ದಾರಿಮಿ, ಎಂ. ಎ. ಅಬ್ದುಲ್ಲಾ ಬೆಳ್ಮ (ವೈಸ್ ಚೇರ್‌ಮ್ಯಾನ್) ಇಕ್ಬಾಲ್ ಬಾಳಿಲ (ಕನ್ವೀನರ್), ಮುಸ್ತಫಾ ಫೈಝಿ ಕಿನ್ಯಾ, ಸಿದ್ದೀಕ್ ಫೈಝಿ ಕರಾಯ, ಕುಕ್ಕಿಲ ಅಬ್ದುಲ್ ಖಾದರ್ ದಾರಿಮಿ, ಉನೈಸ್ ಪೆರಾಜೆ, ಬಶೀರ್ ಅಝ್‌ಹರಿ ಬಾಯಾರ್ (ವೈಸ್ ಕನ್ವೀನರ್), ಸಿತಾರ್ ಅಬ್ದುಲ್ ಮಜೀದ್ ಹಾಜಿ (ಕೋಶಾಧಿಕಾರಿ) ಹಾಗೂ ಸಂಚಾಲಕರಾಗಿ ಇರ್ಷಾದ್ ಕರೆಕ್ಕಾಡ್ ಹಾಗೂ 313 ಮಂದಿ ಸದಸ್ಯರನ್ನು ಸ್ವಾಗತ ಸಮಿತಿಗೆ ಆರಿಸಲಾಯಿತು.

ಮುಸ್ತಫಾ ಫೈಝಿ ಕಿನ್ಯಾ ಸ್ವಾಗತಿಸಿದರು, ಸಿದ್ಧೀಕ್ ಫೈಝಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News