×
Ad

ಮನೆಗೆ ನುಗ್ಗಿ ಚಿನ್ನಾಭರಣ ಕಳವು

Update: 2016-12-13 20:16 IST

ಮಲ್ಪೆ, ಡಿ.14: ಕಡೆಕಾರು ಗ್ರಾಮದ ಕನ್ನರ್ಪಾಡಿ ಬಾಲಾಜಿ ಲೇಔಟ್‌ನ 3ನೇ ಕ್ರಾಸ್‌ನಲ್ಲಿರುವ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಚಿನ್ನಾಭರಣ ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.

ಅಶ್ವಿನಿ ಐತಾಳ್ ಆರು ತಿಂಗಳ ಹಿಂದೆ ತನ್ನ ಗಂಡನನೊಂದಿಗೆ ಮನೆಗೆ ಬೀಗ ಜಡಿದು ವಿದೇಶಕ್ಕೆ ಹೋಗಿದ್ದು, ಡಿ.12ರಂದು ಈ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಮನೆಯ ಮುಖ್ಯ ದ್ವಾರದ ಬಾಗಿಲಿನ ಹಲಗೆಯನ್ನು ಮುರಿದು ಒಳನುಗ್ಗಿದ ಕಳ್ಳರು ಬೆಡ್‌ರೂಂನ ಬಾಗಿಲನ್ನು ತೆಗೆದು ಅದರೊಳಗಿದ್ದ ಮೂರು ಕಬ್ಬಿಣದ ಕಪಾಟುಗಳನ್ನು ಒಡೆದು 24ಸಾವಿರ ರೂ. ವೌಲ್ಯದ 2 ಪವನ್ ತೂಕದ ಚಿನ್ನದ ಸರವನ್ನು ಕಳವು ಮಾಡಿದ್ದಾರೆ.

ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News