ಬಾಂಗ್ಲಾ ಆನ್‌ಲೈನ್ ದರೋಡೆ: ಅಧಿಕಾರಿಗಳು ಶಾಮೀಲು
Update: 2016-12-13 21:14 IST
ಢಾಕಾ, ಡಿ. 13: ನ್ಯೂಯಾರ್ಕ್‌ನ ಫೆಡರಲ್ ರಿಸರ್ವ್ ಬ್ಯಾಂಕ್‌ನಲ್ಲಿ ಬಾಂಗ್ಲಾದೇಶ ಸರಕಾರ ಹೊಂದಿರುವ ಖಾತೆಯಿಂದ ಆನ್‌ಲೈನ್ ಕನ್ನಗಾರರು ಫೆಬ್ರವರಿಯಲ್ಲಿ 81 ಮಿಲಿಯ ಡಾಲರ್ (ಸುಮಾರು 550 ಕೋಟಿ ರೂಪಾಯಿ) ಮೊತ್ತವನ್ನು ದರೋಡೆ ಮಾಡುವಲ್ಲಿ ಬಾಂಗ್ಲಾದೇಶ ಸೆಂಟ್ರಲ್ ಬ್ಯಾಂಕ್‌ನ ಕೆಲವು ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಉನ್ನತ ಪೊಲೀಸ್ ತನಿಖಾಧಿಕಾರಿಯೊಬ್ಬರು ಸೋಮವಾರ ರಾಯ್ಟರ್ಸ್‌ಗೆ ಹೇಳಿದ್ದಾರೆ.