×
Ad

ಮಂಗಳೂರು : ಜಿಲ್ಲಾ ಮಟ್ಟದ ಭಾರ ಎತ್ತುವ ಸ್ಪರ್ಧೆ

Update: 2016-12-13 22:00 IST

ಮಂಗಳೂರು, ಡಿ.13 : ದಕ್ಷಿಣ ಕನ್ನಡ ವೇಟ್‌ಲಿಫ್ಟರ್ಸ್‌ ಅಸೋಸಿಯೇಶನ್ ಮತ್ತು ದ.ಕ. ಅಸೋಸಿಯೇಶನ್ ಆಫ್ ಬಾಡಿ ಬಿಲ್ಡರ್ಸ್‌ ಜಂಟಿ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಭಾರ ಎತ್ತುವ ಸ್ಪರ್ಧೆಯನ್ನು ಮಂಗಳವಾರ ಮಂಗಳೂರಿನ ಡಾನ್‌ಬಾಸ್ಕೊ ಹಾಲ್‌ನಲ್ಲಿ ಆಯೋಜಿಸಲಾಗಿತ್ತು. 

ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕ ಪ್ರದೀಪ್ ಡಿಸೋಜಾ ಸ್ಪರ್ಧೆಯನ್ನು ಉದ್ಘಾಟಿಸಿದರು.

ಅಸೋಸಿಯೇಶನ್‌ನ ಪದಾಧಿಕಾರಿಗಳಾದ ಎಂ.ನಾಗೇಶ್ ಕುಮಾರ್, ಅಶೋಕ್ ಶೆಟ್ಟಿ, ಜಾನ್ ರೆಬೆಲ್ಲೊ, ಫ್ರಾನ್ಸಿಸ್ ಡಿಸೋಜಾ, ಬಿ.ಕಮಲಾಕ್ಷ ಅಮೀನ್, ಪ್ರೇಮನಾಥ ಉಳ್ಳಾಲ್, ಸುಂದರ್ ರಾಜನ್, ಅರ್ತೂರ್ ಡಿಸೋಜಾ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News