ಪ್ರಕೃತಿಗೆ ಪೂರಕವಾದ ಬದುಕು ಅಗತ್ಯ: ಆನೆಗುಂದಿ ಶ್ರೀ

Update: 2016-12-13 17:12 GMT

ಉಡುಪಿ, ಡಿ.8: ಪ್ರಕೃತಿಗೆ ಪೂರಕವಾಗಿ ಬದುಕಿದರೆ ಮಾತ್ರ ಬದುಕು ಉತ್ತಮವಾಗಿರಲು ಸಾಧ್ಯ. ಇಲ್ಲದಿದ್ದರೆ ರೋಗದಿಂದ ನಮ್ಮ ಬದುಕು ಅಂತ್ಯ ವಾಗುತ್ತದೆ. ವಿಷಯುಕ್ತ ಆಹಾರವನ್ನು ಭಾರತದಿಂದ ದೂರ ಮಾಡಿ ಸ್ವದೇಶಿ ಆಹಾರಕ್ಕೆ ಪ್ರಾಮುಖ್ಯತೆ ನೀಡಬೇಕು ಎಂದು ಆನೆಗುಂದಿ ಮಠದ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿ ಹೇಳಿದ್ದಾರೆ.

ವಿಷಮುಕ್ತ ಭಾರತದ ಅಭಿಯಾನದ ಅಂಗವಾಗಿ ಉಡುಪಿ ಕಾಡಬೆಟ್ಟು ಶೋಲ್ ಅಪಾರ್ಟ್‌ಮೆಂಟ್‌ನಲ್ಲಿ ಆರಂಭಿಸಿರುವ ರೈತರಿಗೆ ಹಾಗೂ ಸಾರ್ವ ಜನಿಕರಿಗೆ ಸಾವಯವ ಕೃಷಿ ಬಗ್ಗೆ ಮಾಹಿತಿ ನೀಡುವ ದಕ್ಷಿಣ ಕರ್ನಾಟಕದ ಪ್ರಥಮ ಪತಂಜಲಿ ರೈತ ಸೇವಾ ಕೇಂದ್ರವನ್ನು ಮಂಗಳವಾರ ಉದ್ಘಾಟಿಸಿ ಬಳಿಕ ಚಿಟ್ಪಾಡಿ ಯು.ಎಸ್.ನಾಯಕ್ ಮೆಮೋರಿಯಲ್ ಹಾಲ್‌ನಲ್ಲಿ ಜರಗಿದ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀವರ್ಚನ ನೀಡಿದರು.

ಉತ್ತಮ ಆಹಾರ ಉತ್ತಮ ಮನಸ್ಸು ಸೃಷ್ಠಿಸುತ್ತದೆ. ಸಾವಯವ ಕೃಷಿಯಿಂದ ದೂರವಾಗಿ ರಾಸಾಯನಿಕ ಕೃಷಿಯತ್ತ ನಾವು ದಾಪುಗಾಲು ಇಡುತ್ತಿದ್ದೇವೆ. ಇಂದಿನ ಜಾಹೀರಾತು ಪ್ರಪಂಚ ವಾಸ್ತವವನ್ನು ಮುಚ್ಚಿಟ್ಟು ಸುಳ್ಳನ್ನು ಪ್ರಚಾರ ಮಾಡುತ್ತಿದೆ. ಬಹುರಾಷ್ಟ್ರೀಯ ಕಂಪೆನಿಗಳು ಸುಳ್ಳನ್ನೇ ಸತ್ಯವನ್ನಾಗಿಸುತ್ತಿದೆ ಎಂದು ಅವರು ತಿಳಿಸಿದರು.

ನಂಚಾರು ಯೋಗ ಶಿಕ್ಷಕ ರಾಜೇಂದ್ರ ಚಕ್ಕೇರ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಯೋಗ ಶಿಕ್ಷಕ ಎಚ್.ಎಂ.ನಾಗರಾಜ್, ಫೆಲಿಕ್ಸ್ ಆಲ್ವ ಉಪಸ್ಥಿತ ರಿದ್ದರು. ಕೆ.ಮಹೇಶ್ ಶೆಣೈ ಸ್ವಾಗತಿಸಿದರು. ರಾಘವೇಂದ್ರ ಭಟ್ ಕಾರ್ಯ ಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News