ಭಟ್ಕಳ: ಸಂಭ್ರಮದಿಂದ ಜರುಗಿದ ಶ್ರೀದರ್ ಪದ್ಮಾವತಿ ದೇವಿ ರಥೋತ್ಸವ

Update: 2016-12-13 17:40 GMT

ಭಟ್ಕಳ, ಡಿ.13 :  ಭಟ್ಕಳದ ಪ್ರಸಿದ್ಧ ಶ್ರೀಧರ ಪದ್ಮಾವತಿ ದೇವಿಯ ರಥೋತ್ಸವವು ಅತ್ಯಂತ ಸಂಭ್ರಮ ಸಡಗರದಿಂದ ಜರುಗಿತು. 

ಮುಂಜಾನೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ ಮಧ್ಯಾಹ್ನ ಮಹಾಪೂಜೆ ಅನ್ನಸಂತರ್ಪಣೆ ನಡೆಯಿತು.

ರಥೋತ್ಸವದ ಅಂಗವಾಗಿ ಊರ ಪರ ಊರಿನ ನೂರಾರು ದೇವಿಯ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.

ಸಂಜೆ  ಶ್ರೀ ಪದ್ಮಾವತಿ ದೇವಿ, ಶ್ರೀಧರ ಸ್ವಾಮಿಗಳ ಪಾದುಕೆಯನ್ನು ರಥದಲ್ಲಿರಿಸಿ ಉತ್ಸವ ನಡೆಸಲಾಯಿತು.

ರಥೋತ್ಸವದಲ್ಲಿ ದೇವಸ್ಥಾನದ ಧರ್ಮದರ್ಶಿಗಳಾದ ರಾಮಾ ನಾಯ್ಕ,  ಹಾಗೂ ಪದ್ಮಾವತಿ ನಾಯ್ಕ ದಂಪತಿಗಳು, ಹಿರಿಯ ಸಾಹಿತಿ ಆರ್.ವಿ.ಸರಾಫ್, ಮಾನಾಸುತ, ಶ್ರೀಧರ ಶೇಟ್, ಎಮ್.ಪಿ.ಬಂಢಾರಿ, ಸುರೇಶ ಮುರ್ಡೇಶ್ವರ ನಾರಾಯಣ ಯಾಜಿ, ಗಣೇಶ ಯಾಜಿ, ಪಾಂಡುರಂಗ ಶಿರೂರ, ಪ್ರಕಾಶ ನಾಯ್ಕ, ವೆಂಕಟೇಶ ನಾಯ್ಕ ಆಸರಕೇರಿ, ಎಮ್.ಎಸ್.ನಾಯ್ಕ, ಮಣ್ಕುಳಿ ಹಾಗೂ ಅಯ್ಯಪ್ಪ ಸ್ವಾಮಿ ನೂರಾರು ಭಕ್ತರು ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News