ಬ್ಲಡ್ ಹೆಲ್ಪ್ ಲೈನ್ ಕರ್ನಾಟಕದ ವತಿಯಿಂದ ಭಟ್ಕಳದಲ್ಲಿ ಬೃಹತ್ ರಕ್ತದಾನ ಶಿಬಿರ

Update: 2016-12-13 17:56 GMT

ಭಟ್ಕಳ, ಡಿ.13 : ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಹಾಗೂ ಯಂಗ್ ಸ್ಟಾರ್ ವೇಲ್ಫೇರ್ ಅಸೋಸಿಯೇಷನ್ ಭಟ್ಕಳ ಮತ್ತು ರೆಡ್ ಕ್ರಾಸ್ ಸೊಸೈಟಿ ಬ್ಲಡ್ ಬ್ಯಾಂಕ್ ಕುಂದಾಪುರ ಇವರ ಸಹಭಾಗಿತ್ವದಲ್ಲಿ ನಿನ್ನೆ ಭಟ್ಕಳದಲ್ಲಿ ಬೃಹತ್ ರಕ್ತದಾನ ಶಿಬಿರವು ಬಹಳಷ್ಟು ಹುಮ್ಮಸ್ಸಿನಿಂದ ನಡೆಯಿತು.

     ಪುರುಷರು,ಮಹಿಳೆಯರು ಎನ್ನದೆ ದಾನಿಗಳು ಹರಿದುಬಂದು ಈ ಒಂದು ಶಿಬಿರವನ್ನು ನಿರೀಕ್ಷೆಗೂ ಮೀರಿದ ರಕ್ತದಾನದ ಮೂಲಕ ರಕ್ತದಾನದಲ್ಲಿ ಜನಸಾಮಾನ್ಯರಿಗೆ ಇರುವ ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ.

     ಒಟ್ಟು 170 ಯುನಿಟ್ ರಕ್ತವು ದಾನಿಗಳಿಂದ ಪಡೆಯುವ ಮೂಲಕ ನಿರೀಕ್ಷೆಗೂ ಮೀರಿದ ಒಂದು ರಕ್ತದಾನ ಶಿಬಿರವು ನಿನ್ನೆ ಭಟ್ಕಳದಲ್ಲಿ ಜರುಗಿತು.

     ಇದೇ ವೇಳೆ ರಕ್ತದಾನ ಶಿಬಿರದಲ್ಲಿ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಗ್ರೂಪಿನ ಉಡುಪಿ ವಲಯದ ಎಡ್ಮಿನ್ ಆದ ಶೇಖ್ ಫಯಾಝ್ ಅಲಿ ಬೈಂದೂರು  ಇವರನ್ನು   ಸನ್ಮಾನಿಸಲಾಯಿತು.

ಹಾಗೆಯೇ ಕರ್ನಾಟಕದಾದ್ಯಂತ ಈ ಒಂದು ಮಹತ್ತರವಾದ ರಕ್ತದಾನ ಅಂದೋಲನವನ್ನು ಸೃಷ್ಟಿಸಿದ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಗ್ರೂಪಿನ ಸ್ಥಾಪಕರಲ್ಲಿ ಓರ್ವರಾದ ನಿಸಾರ್ ದಮ್ಮಾಮ್ ಉಳ್ಳಾಲ ಇವರನ್ನು ಸ್ಮರಣಿಕೆ ನೀಡುವ ಮೂಲಕ  ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

       ಮುಖ್ಯ ಅತಿಥಿಗಳಾಗಿ ಸಾದಿಕ್ ಮಟ್ಟ ,ಇನ್ಯತುಲ್ಲಾ ಶಾಬಾಂದ್ರಿ ,ಇಮ್ರಾನ್ ಲಂಕ ,ಎಸ್.ಜಯಕರ್ ಶೆಟ್ಟಿ ,ಡಾ!ಉಮೇಶ್ ಪುತ್ರನ್, ನಿಸಾರ್ ದಮ್ಮಾಮ್ ಉಳ್ಳಾಲ, ಸಾಜಾನ್ ಉಳ್ಳಾಲ, ಸಾದಿಕ್ ಪಾವೂರು,ಮೌಲಾನ ಅಬೂ ಸಾಲಿ, ಸಿರಾಜ್ ಬಂಗಾಳಿ ಉಪಸ್ಥಿತರಿದ್ದರು.

ಭಟ್ಕಳದ ಆಸುಪಾಸಿನಲ್ಲಿ ಬ್ಲಡ್ ಬ್ಯಾಂಕ್ ನಿರ್ಮಿಸಬೇಕೆಂಬ ಬೇಡಿಕೆಗಳನ್ನು ಸಾರ್ವಜನಿಕರು ಮುಂದಿಟ್ಟರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News