ಕಟ್ಟುಕಟ್ಟಳೆಗೆ ಸೀಮಿತವಾದ ಶಿರ್ವ ಕಂಬಳ
Update: 2016-12-13 23:58 IST
ಶಿರ್ವ, ಡಿ.13: ತುಳುನಾಡಿನ ಜನಪದ ಕ್ರೀಡೆ ಕಂಬಳಗಳ ಪಟ್ಟಿಯಲ್ಲಿ ವರ್ಷದ ಪ್ರಥಮ ಕಂಬಳ ಎಂಬ ಖ್ಯಾತಿಗೆ ಪಾತ್ರವಾಗಿರುವ ಶಿರ್ವ ನಡಿಬೆಟ್ಟು ಕಂಬಳವು ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ರವಿವಾರ ಕೇವಲ ಕಟ್ಟುಕಟ್ಟಳೆಗೆ ಸೀಮಿತವಾಗಿ ನಡೆಯಿತು.
ಸಾಂಪ್ರದಾಯಿಕ ಕಂಬಳದಲ್ಲಿ ಕೋಣಗಳನ್ನು ಓಡಿಸದೆ ಕೇವಲ ಕಂಬಳ ಮನೆಯ ಜೋಡಿಯನ್ನು ಗದ್ದೆಗಿಳಿಸಿ ಸಾಂಪ್ರದಾಯಿಕ ಆಚರಣೆಗಳನ್ನಷ್ಟೇ ನಡೆಸಿ ಕಟ್ಟುಕಟ್ಟಳೆ ನೆರವೇರಿಸಲಾಯಿತು. ಬಂಟ ಕೋಲ, ಅನ್ನಸಂತರ್ಪಣೆ ಸಹಿತ ಧಾರ್ಮಿಕ ಸಂಪ್ರದಾಯಗಳನ್ನಷ್ಟೇ ನಡೆಸಲಾಯಿತು.
ದಾಮೋದರ ಚೌಟ, ರತ್ನವರ್ಮ ಹೆಗ್ಡೆ, ಶಶಿಧರ ಹೆಗ್ಡೆ, ಸುರೇಶ್ ಶೆಟ್ಟಿ ಗುರ್ಮೆ, ಕೊಲ್ಲಬೆಟ್ಟು ರವೀಂದ್ರ ಶೆಟ್ಟಿ, ಕುಶ ಶೆಟ್ಟಿ ನ್ಯಾರ್ಮ, ಸದಾನಂದ ಸಪಳಿಗ, ವಿಠಲ ಅಂಚನ್ ಮತ್ತಿತರರು ಉಪಸ್ಥಿತರಿದ್ದರು.