ಆಮಿರ್‌ಗೆ ನೋ ಎಂದರು ರಜನಿ!

Update: 2016-12-14 04:53 GMT

ಈ ವರ್ಷದ ಬಹುನಿರೀಕ್ಷಿತ ಬಾಲಿವುಡ್ ಚಿತ್ರ ದಂಗಲ್ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಆಮಿರ್‌ಖಾನ್ ನಾಯಕನಟನಾಗಿರುವ ಈ ಚಿತ್ರವನ್ನು ನಿತೇಶ್ ತಿವಾರಿ ನಿರ್ದೇಶಿಸಿದ್ದಾರೆ. ಆಮಿರ್‌ಖಾನ್ ಹಾಗೂ ಸಿದ್ಧಾರ್ಥರಾಯ್ ಕಪೂರ್ ಜಂಟಿಯಾಗಿ ನಿರ್ಮಿಸಿದ ಈ ಚಿತ್ರ, ಮಾಜಿ ಕುಸ್ತಿಪಟು, ತರಬೇತುದಾರ ಮಹಾವೀರ್ ಸಿಂಗ್ ಪೋಗತ್ ಅವರ ಜೀವನಕಥೆಯನ್ನು ಆಧರಿಸಿದೆ.

ಈ ಚಿತ್ರವನ್ನು ಮತ್ತಷ್ಟು ಅದ್ದೂರಿಯಾಗಿಸುವ ಸಲುವಾಗಿ ಆಮಿರ್‌ಖಾನ್ ಅವರು, ದಕ್ಷಿಣದ ಖ್ಯಾತ ತಾರೆ ರಜನಿಕಾಂತ್ ಅವರಿಗೆ, ತಮ್ಮ ಪಾತ್ರವನ್ನು ಡಬ್ ಮಾಡಿ ತಮಿಳುಭಾಷೆಯಲ್ಲಿ ಬಿಡುಗಡೆ ಮಾಡುವಂತೆ ಮನವಿ ಮಾಡಿಕೊಂಡಿದ್ದರು ಎಂಬ ಅಂಶ ಇದೀಗ ಬಹಿರಂಗವಾಗಿದೆ. "ಇದಕ್ಕಾಗಿ ಆಮಿರ್‌ಖಾನ್, ಈ ಮೇರುನಟನಿಗೆ ಖಾಸಗಿಯಾಗಿ ಚಿತ್ರವೀಕ್ಷಣೆಗೆ ವ್ಯವಸ್ಥೆಯನ್ನೂ ಮಾಡಿದ್ದರು. ಆದರೆ ಇದನ್ನು ರಜನಿಕಾಂತ್ ನಯವಾಗಿ ತಿರಸ್ಕರಿಸಿದರು" ಎಂದು ಆಪ್ತ ಮೂಲಗಳಿಂದ ತಿಳಿದುಬಂದಿದೆ.

ದಂಗಲ್ ಚಿತ್ರದ ತಮಿಳು ಅವತರಣಿಕೆಯನ್ನು ಹಿಂದಿ ಚಿತ್ರದ ಬಿಡುಗಡೆಯಂದೇ ಅಂದರೆ ಡಿಸೆಂಬರ್ 23ರಂದು ಬಿಡುಗಡೆ ಮಾಡಲು ನಿರ್ಮಾಪಕರು ಉದ್ದೇಶಿಸಿದ್ದಾರೆ ಎಂದು ಈ ಹಿಂದೆ ವರದಿಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News