×
Ad

ಪುತ್ತೂರಿನಲ್ಲಿ ಮಹಿಳೆಯ ಸರಗಳ್ಳತನ

Update: 2016-12-14 13:09 IST

ಪುತ್ತೂರು, ಡಿ.14: ಬೈಕ್‌ನಲ್ಲಿ ಬಂದ ಕಳ್ಳರು ಮಹಿಳೆಯೊಬ್ಬರ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಎಗರಿಸಿರುವ ಘಟನೆ ಪುತ್ತೂರಿನ ತೆಂಕಿಲದಲ್ಲಿ ಇಂದು ನಡೆದಿದೆ.
 ಇಲ್ಲಿನ ನಿವಾಸಿ ಯಮುನಾ ಚಿನ್ನಾಭರಣ ಕಳೆದುಕೊಂಡವರು. ಇವರ ಕೊರಳಲ್ಲಿದ್ದ 24 ಗ್ರಾಂನ ಚಿನ್ನದ ಸರವನ್ನು ಪಲ್ಸರ್ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಎಗರಿಸಿ ಪರಾರಿಯಾಗಿದ್ದಾರೆ.
ಈ ಬಗ್ಗೆ ಪುತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News