ನೂತನ ‘ಎನ್ಮಾರ್ಕ್ ಎಮೆರಾಲ್ಡ್’ ವಸತಿ ಸಮುಚ್ಚಯ ಉದ್ಘಾಟನೆ
ಮಂಗಳೂರು, ಡಿ.14: ನಗರದ ಎನ್ಮಾರ್ಕ್ ಬಿಲ್ಡರ್ಸ್ ವತಿಯಿಂದ ಜೆಪ್ಪು ಮಂಕಿಸ್ಟಾಂಡ್ ಬಳಿ ನೂತನವಾಗಿ ನಿರ್ಮಿಸಲಾದ ‘ಎನ್ಮಾಕ್ ಎಮೆರಾಲ್ಡ್’ ವಾಣಿಜ್ಯ ಮತ್ತು ವಸತಿ ಸಂಕೀರ್ಣ ಇಂದು ಉದ್ಘಾಟನೆಗೊಂಡಿತು.
ನಾಲ್ಕು ಅಂತಸ್ತಿನ 12 ವಸತಿಗಳ ಈ ಸಮುಚ್ಚಯವನ್ನು ಉದ್ಯಮಿ ಹಾಗೂ ದಮಾಮ್‌ನ ಗ್ರೂಪ್ ಆಫ್ ಕಬಾಬೀಸ್ ರೆಸ್ಟೋರೆಂಟ್‌ನ ಮುಹಮ್ಮದ್ ಮೊಹ್ಸಿನ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕಾರ್ಪೊರೇಟರ್‌ಗಳಾದ ಪ್ರೇಮಾನಂದ ಶೆಟ್ಟಿ. ರತಿಕಲಾ, ಎ.ಕೆ.ಗ್ರೂಪ್‌ನ ಎ.ಕೆ.ನಿಯಾಝ್, ಎನ್‌ಮಾರ್ಕ್ ಬಿಲ್ಡರ್ಸ್‌ನ ಪಾಲುದಾರರಾದ ನೂರ್, ಮುನೀರ್, ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞಿ, ಚಾರ್ಟರ್ಡ್ ಅಕೌಂಡೆಂಟ್ ವ್ನಿೇಶ್, ಆರ್ಕಿಟೆಕ್ಟ್ ರಮಾನಂದ, ಉದ್ಯಮಿ ಅಬ್ದುಲ್ ರವೂಫ್ ಪುತ್ತಿಗೆ, ಇಬ್ರಾಹೀಂ ಬಜ್ಪೆ, ಮಾಜಿ ಕಾರ್ಪೊರೇಟರ್ ಭಾಸ್ಕರ್ ರಾವ್, ಗುತ್ತಿಗೆದಾರ ವ್ನಿೇಶ್ವರ ವಿ. ನಾಯಕ್ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಹಮ್ಮದ್ ಕುಂಞಿ ಅವರು, ನೋಟು ಅಮಾನ್ಯದಿಂದ ಜನಸಾಮಾನ್ಯರಿಗಾಗುತ್ತಿರುವ ತೊಂದರೆಯ ನಡುವೆಯೂ ಎನ್‌ಮಾರ್ಕ್ ಬಿಲ್ಡರ್ಸ್‌ನವರು ವಸತಿ ಸಮುಚ್ಚಯದ ಗ್ರಾಹಕರಿಗೆ ತಾವು ನೀಡಿದ್ದ ನಿಗದಿತ ಅವಧಿಗಿಂತ 17 ದಿನಗಳು ಮುಂಚಿತವಾಗಿ ವಸತಿಯನ್ನು ಹಸ್ತಾಂತರಿಸುವುದು ಸಂಸ್ಥೆಯ ಪ್ರಾಮಾಣಿಕತೆಯನ್ನು ತೋರಿಸುತ್ತದೆ. ಇಂತಹ ಪ್ರಾಮಾಣಿಕತೆಯು ಉಳಿಸಿಕೊಳ್ಳುವಂತಾಗಲಿ ಎಂದು ಹೇಳಿ ಶುಭ ಹಾರೈಸಿದರು.
ಸಂಸ್ಥೆಯ ಪಾಲುದಾರರಾದ ನೂರ್ ಹಾಗೂ ಮುನೀರ್ ಈ ಸಂದರ್ಭದಲ್ಲಿ ಗುತ್ತಿಗೆದಾರರು, ವಾಸ್ತುಶಿಲ್ಪಿ ಸಹಿತ ಸಮುಚ್ಚಯ ನಿರ್ಮಾಣದಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದವರಿಗೆ ಸನ್ಮಾನಿಸಿದರು.
ಟ್ಯಾಲೆಂಟ್ ರೀಸರ್ಚ್ ಫೌಂಡೇಶನ್‌ನ ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.