ಅತ್ಯಾಚಾರ ಪ್ರಕರಣ : ಆರೋಪಿ ಖುಲಾಸೆ
Update: 2016-12-14 17:05 IST
ಮೂಡುಬಿದಿರೆ,ಡಿ.14: ಸಮೀಪದ ಪಡುಮಾರ್ನಡು ಗ್ರಾಮದಲ್ಲಿ ಎರಡು ವರ್ಷದ ಹಿಂದೆ ನಡೆದ ಯುವತಿಯೋರ್ವಳ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯನ್ನು ದ.ಕ ಜಿಲ್ಲಾ ಸೆಶನ್ಸ್ ನ್ಯಾಯಾಲಯ ಖುಲಾಸೆಗೊಳಿಸಿದ
ಪಡುಮಾರ್ನಾಡಿನ ಕೃಷಿಕ ದಯಾನಂದ ಹೆಗ್ಡೆ ಎಂಬವರು 2014 ಅಕ್ಟೋಬರ್ 10ರಂದು ನೆರೆಮನೆಯ ಯುವತಿಯೋರ್ವಳನ್ನು ಅತ್ಯಾಚಾರವೆಸಗಿದ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದರು. ಆರೋಪಿ ವಿರುದ್ಧ ಪೊಲೀಸರು ಅತ್ಯಾಚಾರ ಪ್ರಕರಣ ದಾಖಲಿಸಿ ಕೋರ್ಟ್‌ಗೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಕೆಲ ತಿಂಗಳ ಬಳಿಕ ಆರೋಪಿಗೆ ಕೋರ್ಟ್ ಜಾಮೀನು ನೀಡಿತ್ತು. ಆದರೆ ವಿಚಾರಣೆ ಮುಂದುವರಿದಿತ್ತು. ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ನ್ಯಾಯಾಧೀಶರು ಇತ್ತೀಚೆಗೆ ಆರೋಪಿಯನ್ನು ದೋಷಮುಕ್ತಗೊಳಿಸಿ ತೀರ್ಪು ನೀಡಿದ್ದಾರೆ.