ಪೊಲೀಸರಿಂದ ಹೊಟೇಲ್‌ಗೆ ದಾಳಿ : ರೂ.3.25 ಕೋಟಿಯ ಹಳೆ ನೋಟು ವಶ

Update: 2016-12-14 14:18 GMT

ಹೊಸದಿಲ್ಲಿ, ಡಿ.14: ಕರೋಲ್‌ಬಾಗ್‌ನ ಹೊಟೇಲೊಂದಕ್ಕೆ ದಾಳಿ ನಡೆಸಿದ ಪೊಲೀಸರು ರೂ. 3.25 ಕೋಟಿ ಮೊತ್ತದ ರದ್ದಾದ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ಗುಪ್ತ ಮಾಹಿತಿಯನ್ನಾಧರಿಸಿ ನಿನ್ನೆ ರಾತ್ರಿ ಆದಾಯ ತೆರಿಗೆ ಅಧಿಕಾರಿಗಳೊಂದಿಗೆ ಕರೋಟ್ ಬಾಗ್‌ನ ತಕ್ಷ್ ಇನ್‌ಗೆ ದಾಳಿ ನಡೆಸಿದ ಕ್ರೈಂ ಬ್ರಾಂಚ್, ಹೊಟೇಲ್‌ನ ಎರಡು ಕೊಠಡಿಗಳಲ್ಲಿ ಒಟ್ಟು ರೂ. 3.25 ಕೋಟಿ ಇರಿಸಿಕೊಂಡಿದ್ದ ಐವರು ವ್ಯಕ್ತಿಗಳನ್ನು ಪತ್ತೆ ಮಾಡಿತೆಂದು ಜಂಟಿ ಪೊಲೀಸ್ ಆಯುಕ್ತ ರವೀಂದ್ರ ಯಾದವ್ ಹೇಳಿದ್ದಾರೆ.

ಈ ಐವರು ಸಾಗಾಟಗಾರರನ್ನು ಅನ್ಸಾರಿ ಅಬುಝರ್, ಫಝಲ್‌ಖಾನ್, ಅನ್ಸಾರಿ ಅಫ್ಘಾನ್ ಲಾಡು ರಾಮ್ ಹಾಗೂ ಮಹಾವೀರ್ ಸಿಂಗ್ ಎಂದು ಗುರುತಿಸಲಾಗಿದೆ.

ಹಣವನ್ನು ಬೇರೆ ಬೇರೆ ಸೂಟ್‌ಕೇಸ್ ಹಾಗೂ ಕಾರ್ಡ್‌ಬೋರ್ಡ್ ಪೆಟ್ಟಿಗೆಗಳಲ್ಲಿರಿಸಲಾಗಿತ್ತು ಈ ಹಣವು ಮುಂಬೈಯ ಕೆಲವು ಹವಾಲಾ ಸಂಚಾಲಕರಿಗೆ ಸೇರಿದುದೆಂದು ತನಿಖೆಯ ವೇಳೆ ತಿಳಿದುಬಂದಿದೆ.

ಈ ಹಣವನ್ನು ವಿಮಾನ ನಿಲ್ದಾಣದ ಸ್ಕಾನಿಂಗ್ ಯಂತ್ರಗಳೂ ಪತ್ತೆ ಮಾಡದಂತೆ ಪ್ಯಾಕ್ ಮಾಡಲು ಅವರು ಪರಿಣತರ ಸಹಾಯ ಪಡಿದಿದ್ದರು. ಆರೋಪಿಗಳ ಮೊಬೈಲ್ ಫೋನ್‌ಗಳಲ್ಲಿ ಹಲವು ಮಂದಿ ಹವಾಲಾ ಸಂಚಾಲಕರ ವಿವರವಿದ್ದು, ಹಣವನ್ನು ವಶಪಡಿಸಿಕೊಂಡಿರುವ ತೆರಿಗೆ ಅಧಿಕಾರಿಗಳು ಮೊಬೈಲ್ ಪೋನ್‌ಗಳ ವಿವರವನ್ನು ವಿಶ್ಲೇಷಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News