ನಾಳೆಯಿಂದ ಹಳೆಯ 500 ನೋಟು ಸ್ವೀಕಾರವಿಲ್ಲ

Update: 2016-12-14 14:10 GMT

ಹೊಸದಿಲ್ಲಿ, ಡಿ.14: ವಿದ್ಯುತ್ ಬಿಲ್, ನೀರಿನ ಬಿಲ್ ಸೇರಿದಂತೆ ಜನೋಪಯೋಗಿ ಸೇವೆಗಳ ಪಾವತಿಗೆ ಮತ್ತು ಔಷಧಿ ಖರೀದಿ ವೇಳೆ ಪಾವತಿಗೆ ಹಳೆಯ 500 ರೂ. ನೋಟುಗಳನ್ನು ಬಳಸುವ ವಿನಾಯಿತಿ ಸೌಲಭ್ಯ ಡಿ.15ರ ಮಧ್ಯರಾತ್ರಿಗೆ ಕೊನೆಗೊಳ್ಳಲಿದೆ.
 
ಹಳೆಯ 500 ರೂ. ನೋಟಿನಿಂದ ಮೊಬೈಲ್ ರಿಚಾರ್ಜ್ ಮಾಡುವ ಅವಕಾಶವೂ ಇದೇ ಸಂದರ್ಭ ಕೊನೆಗೊಳ್ಳಲಿದೆ. ಈ ಸೌಲಭ್ಯವನ್ನು ಮುಂದುವರಿಸದಿರಲು ಸರಕಾರ ನಿರ್ಧರಿಸಿದೆ.

ಆದರೆ ಹಳೆಯ 500 ರೂ. ಮುಖಬೆಲೆಯ ನೋಟುಗಳನ್ನು ಬ್ಯಾಂಕಿನಲ್ಲಿ ಠೇವಣಿ ಇಡುವ ಸೌಲಭ್ಯ ಮುಂದುವರಿಯಲಿದೆ ಎಂದು ವಿತ್ತ ಸಚಿವಾಲಯದ ಕಾರ್ಯದರ್ಶಿ ಶಶಿಕಾಂತ ದಾಸ್ ಟ್ವೀಟ್ ಮಾಡಿದ್ದಾರೆ. ನೋಟು ಅಮಾನ್ಯಗೊಳಿಸಿದ ಬಳಿಕ ನಗದು ರಹಿತ ಪಾವತಿ ವ್ಯವಸ್ಥೆಗೆ ಸರಕಾರ ಹೆಚ್ಚಿನ ಮುತುವರ್ಜಿ ತೋರಿಸುತ್ತಿದ್ದು ಹಲವಾರು ಉತ್ತೇಜಕ ಪ್ಯಾಕೇಜ್‌ಗಳನ್ನು ಘೋಷಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News