×
Ad

ಡಿ.16ರಂದು ಕೆಎಸ್ಸಾರ್ಟಿಸಿ ಸಾರ್ವಜನಿಕ ಸಂಪರ್ಕ ಸಭೆ

Update: 2016-12-14 19:50 IST

ಉಡುಪಿ, ಡಿ.14: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕುಂದಾಪುರ ಘಟಕದ ವತಿಯಿಂದ ಬಸ್ಸುಗಳ ಕಾರ್ಯಾಚರಣೆಯ ಬಗ್ಗೆ ಘಟಕ ಮಟ್ಟದಲ್ಲಿ ಸಾರ್ವಜನಿಕ ಸಂಪರ್ಕ ಸಭೆಯು ಡಿ.16ರ ಶುಕ್ರವಾರ ಬೆಳಗ್ಗೆ 10 ಗಂಟೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಕುಂದಾಪುರ ಘಟಕ ಮೂರುಕೈ ಕುಂದಾಪುರಇಲ್ಲಿ ನಡೆಯಲಿದೆ.

ಈ ಸಭೆಯಲ್ಲಿ ಪ್ರಯಾಣಿಕರು ಸಂಸ್ಥೆಯ ಬಸ್ಸುಗಳ ಕಾರ್ಯಾಚರಣೆಯನ್ನು ಉತ್ತಮ ಪಡಿಸುವ ನಿಟ್ಟಿನಲ್ಲಿ ತಮ್ಮ ಅಹವಾಲು ಸಲಹೆ/ಸೂಚನೆಗಳನ್ನು ಸಲ್ಲಿಸಬಹುದು ಎಂದು ನಿಗಮದ ಕುಂದಾಪುರ ಘಟಕದ ವ್ಯವಸ್ಥಾಪಕರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News