ಮುಕ್ತ ಟಿವಿಯಿಂದ ತುಳು ಚಲನಚಿತ್ರ ಪ್ರಶಸ್ತಿ ಪ್ರದಾನ
ಉಡುಪಿ, ಡಿ.14:ಕರಾವಳಿ ಕರ್ನಾಟಕದ ದೃಶ್ಯಮಾಧ್ಯಮ ಲೋಕಕ್ಕೆ ನೂತನವಾಗಿ ಪಾದಾರ್ಪಣೆ ಮಾಡುತ್ತಿರುವ ಮುಕ್ತ ಟಿವಿ ಮುಂದಿನ ಜ.29 ರಂದು ಅಧಿಕೃತವಾಗಿ ಉದ್ಘಾಟನೆಗೊಂಡ ಬಳಿಕ ಇದೇ ಮೊದಲ ಬಾರಿಗೆ ತುಳು ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಿದೆ ಎಂದು ಸಂಸ್ಥೆಯ ಆಡಳಿತ ನಿರ್ದೇಶಕ ವಿವೇಖ್ ಸುವರ್ಣ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎರಡು ತಿಂಗಳಿಂದ ಪ್ರಾಯೋಗಿಕ ಪ್ರಸಾರವನ್ನು ನಡೆಸುತ್ತಿರುವ ಈ ಸುದ್ದಿವಾಹಿನಿಯ ಲೋಕಾರ್ಪಣಾ ಕಾರ್ಯಕ್ರಮ ಜನವರಿ 29ರಂದು ಮಲ್ಪೆ ಕಡಲತೀರದಲ್ಲಿ ನಡೆಯಲಿದೆ. ಸುದ್ದಿವಾಹಿನಿ ಜ.29ರಂದು ಅದ್ದೂರಿಯಾಗಿ ಉದ್ಘಾಟನೆಗೊಂಡು ಅವಳಿ ಜಿಲ್ಲೆಗಳ ಮೂಲೆಮೂಲೆಯನ್ನು ತಲುಪಲಿದೆ ಎಂದವರು ನುಡಿದರು.
ತುಳು ಚಲನಚಿತ್ರ ಪ್ರಶಸ್ತಿ: ಈ ಹಿನ್ನೆಲೆಯಲ್ಲಿ ಮುಕ್ತ ಟಿವಿ ತುಳು ಚಲನಚಿತ್ರ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಹಮ್ಮಿಕೊಂಡಿದೆ. 2016ನೇ ಸಾಲಿನಲ್ಲಿ ಜ.1ರಿಂದ ಡಿ.31ರವರೆಗೆ ಬಿಡುಗಡೆಗೊಂಡ ತುಳು ಚಿತ್ರಗಳನ್ನು ಚಲನಚಿತ್ರ ಪ್ರಶಸ್ತಿಗೆ ಪರಿಗಣಿಸಲಾಗುವುದು. ಚಲನಲೋಕದ ದಿಗ್ಗಜರು, ತೀರ್ಪುಗಾರರು ನೀಡುವ ತೀರ್ಪು ಮತ್ತು ಕಲಾಭಿಮಾನಿಗಳ ಅಭಿಪ್ರಾಯ ಗಳನ್ನು ಸಂಗ್ರಹಿಸಿ ಪ್ರಶಸ್ತಿ ಪುರಸ್ಕೃತರ ಪಟಿ್ಟಯನ್ನು ತಯಾರಿಸಲಿದ್ದೇವೆ ಎಂದರು.
ತುಳು ಚಲನಚಿತ್ರ ಪ್ರಶಸ್ತಿ: ಈ ಹಿನ್ನೆಲೆಯಲ್ಲಿ ಮುಕ್ತ ಟಿವಿ ತುಳು ಚಲನಚಿತ್ರ ಪ್ರಶಸ್ತಿ ಪ್ರಾನಸಮಾರಂವನ್ನು ಹಮ್ಮಿಕೊಂಡಿದೆ. 2016ನೇ ಸಾಲಿನಲ್ಲಿ ಜ.1ರಿಂದ ಡಿ.31ರವರೆಗೆ ಬಿಡುಗಡೆಗೊಂಡ ತುಳು ಚಿತ್ರಗಳನ್ನು ಚಲನಚಿತ್ರ ಪ್ರಶಸ್ತಿಗೆ ಪರಿಗಣಿಸಲಾಗುವುದು. ಚಲನಲೋಕದ ದಿಗ್ಗಜರು, ತೀರ್ಪುಗಾರರು ನೀಡುವ ತೀರ್ಪು ಮತ್ತು ಕಲಾಭಿಮಾನಿಗಳ ಅಭಿಪ್ರಾಯ ಗಳನ್ನು ಸಂಗ್ರಹಿಸಿ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ತಯಾರಿಸಲಿದ್ದೇವೆ ಎಂದರು. ಸಾಮಾಜಿಕ ಜಾಲತಾಣಗಳ ಮೂಲಕ ಜನಸಾಮಾನ್ಯರ ಅಭಿಪ್ರಾಯ ಗಳನ್ನು ಸಂಗ್ರಹಿಸಿ ಜನಪ್ರಿಯ ನಟ, ನಟಿ ಮತ್ತು ಹಾಸ್ಯನಟರ ಆಯ್ಕೆಯನ್ನು ಮಾಡಲಾಗುವುದು. ಉಳಿದಂತೆ ಚಲನಚಿತ್ರ ರಂಗದ ನುರಿತ ತೀರ್ಪುಗಾರರ ಮೂಲಕ ಅತ್ಯುತ್ತಮ ನಟ, ನಟಿ, ಹಾಸ್ಯನಟಿ, ಪೋಷಕ ನಟ, ನಟಿ ಸೇರಿದಂತೆ 10ಕ್ಕೂ ಅಧಿಕ ವಿಭಾಗಗಳಲ್ಲಿ ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಲಾಗುವುದು. ಈ ಬಾರಿ ಆಯ್ಕೆಗೆ 2016ರ ತುಳು ಚಿತ್ರಗಳನ್ನು ಮಾತ್ರ ಪರಿಗಣಿಸಲಾಗುವುದುಎಂದು ವಿವೇಕ್ ಸುವರ್ಣ ತಿಳಿಸಿದರು.
ಮುಕ್ತ ಫಿಲ್ಮ್ ಅವಾರ್ಡ್ ಪುರಸ್ಕಾರವನ್ನು ಪ್ರತಿವರ್ಷವೂ ಆಯೋಜಿಸುವ ಚಿಂತನೆಯನ್ನು ಸಂಸ್ಥೆ ನಡೆಸಿದ್ದು, ಉತ್ತಮ ಗುಣಮಟ್ಟವನ್ನು ಕಾಯ್ದುಕೊಳ್ಳುವ ಉದ್ಧೇಶದಿಂದ ಈ ಕಾರ್ಯಕ್ರಮಕ್ಕಾಗಿ ನುರಿತ ಆಯೋಜಕರ ಸಮಿತಿಯನ್ನು ರಚಿಸಲಾಗಿದೆ. ಕನ್ನಡ ಚಿತ್ರರಂಗದ ಮೂವರು ಪ್ರಖ್ಯಾತ ತಾರೆಯರು ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಆಡಳಿತ ವ್ಯವಸ್ಥಾಪಕ ಅಶ್ವಥ್ ಕಾಂಚನ್, ಕಾರ್ಯಕ್ರಮ ವಿಭಾಗದ ಮುಖ್ಯಸ್ಥೆ ಸರಸ್ವತಿ ಅಮಿತ್, ಸುದ್ದಿ ವಿಭಾಗದ ಮುಖ್ಯಸ್ಥ ಶ್ರೀಕಾಂತ್ ಶೆಟ್ಟಿ, ಮುಖ್ಯ ವರದಿಗಾರ ಪ್ರಜ್ವಲ್ ಅಮೀನ್ ಉಪಸ್ಥಿತರಿದ್ದರು.