×
Ad

ಭಾರತೀಯರ ಜ್ಞಾನಕ್ಕೆ ಜಗತ್ತು ತಲೆಬಾಗುತ್ತಿದೆ : ನಾಗೇಶ್ ಭಟ್

Update: 2016-12-14 20:47 IST

ಭಟ್ಕಳ,ಡಿ.14: ಭಾರತೀಯರ ಜ್ಞಾನದ ಮಟ್ಟ ಉನ್ನತ ಸ್ಥರದಲ್ಲಿದ್ದು ಇದಕ್ಕೆ ಜಗತ್ತು ಇಂದು ತಲೆಬಾಗುತ್ತಿದೆ ಎಂದು ಶ್ರೀಗುರು ಸುಧೀಂದ್ರ ಬಿಸಿಎ ಮತ್ತು ಬಿಬಿಎ ಕಾಲೇಜಿನ ಪ್ರಾಂಶುಪಾಲ ನಾಗೇಶ್ ಭಟ್ ಹೇಳೀದರು.

ಅವರು ಬುಧವಾರ ಜಾಮಿಯಾಬಾದ್ ನ ನ್ಯೂಶಮ್ಸ್ ಸ್ಕೂಲ್ ಹಾಗೂ ಶಮ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಾರ್ಷೀಕ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ಮೈಕ್ರೋಸಾಫ್ಟ್ ಕಂಪನಿಯ ಪ್ರಸ್ತುತ ಸಿಇಒ ಸತ್ಯ ನಾಡಲ್ಲಾ ಭಾರತೀಯರೇ ಆಗಿದ್ದು ಜಗತ್ತಿನ ಇತರರನ್ನು ಭಾರತೀಯರನ್ನೇ ಯಾಕೆ ಅಂತಹ ಮಹತ್ವದ ಹುದ್ದೆ ನೀಡಲಾಗಿದೆ ಎನ್ನುವದರ ಕುರಿತು ನಾವು ಯೋಚಿಸಬೇಕಾಗಿದೆ. ಇಲ್ಲಿ ಪ್ರತಿಭೆಗಳಿವೆ. ಆ ಮಟ್ಟಕ್ಕೆ ನಾವು ಬೆಳೆಯಬೇಕಾದರೆ ವಿದ್ಯಾರ್ಥಿ ದೆಸೆಯಲ್ಲಿ ಪುಸ್ತಕಗಳಿಂದ ಹೊರಬಂದು ಯೋಚನೆ ಮಾಡುವುದನ್ನು ಕಲಿಯಬೇಕೆಂದು ಅವರು ವಿದ್ಯಾರ್ಥಿಗಳೀಗೆ ಕರೆ ನೀಡಿದರು. ಶಿಕ್ಷಣದ ಮೂಲಕ ಜ್ಞಾನ ವೃದ್ಧಿಯಾಗುತ್ತದೆ. ಅದರ ಜೊತೆಗೆ ನಮ್ಮ ಶಿಕ್ಷಣ ನಮ್ಮನ್ನು ಮನುಷ್ಯರನ್ನಾಗಿ ಪರಿವರ್ತನೆ ಮಾಡಬೇಕಾದರೆ ನಾವು ನಮ್ಮ ಜೀವನದಲ್ಲಿ ಉತ್ತಮ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದರು.

ಜಾಲಿ ಪಟ್ಟಣ ಪಂಚಾಯತ್ ಸದಸ್ಯ ಹಾಗೂ ತಂಝೀಮ್ ಮುಖಂಡ ಸೈಯ್ಯದ್ ಇಮ್ರಾನ್ ಲಂಕಾ ಮಾತನಾಡಿ, ವಿದ್ಯಾರ್ಥಿಗಳು ತಮ್ಮಲ್ಲಿನ ಪ್ರತಿಭೆಗಳನ್ನು ಹೊರಸೂಸಲು ಶಾಲಾ ಕಾರ್ಯಕ್ರಮಗಳು ಬಹಳ ಅವಶ್ಯಕವಾಗಿದ್ದು ಪ್ರತಿಯೊಬ್ಬರು ಆಸಕ್ತಿಯಿಂದ ಭಾಗವಹಿಸಬೇಕೆಂದು ಕರೆ ನೀಡಿದರು.

ತರಬಿಯತ್ ಎಜ್ಯುಕೇಶನ್ ಸೂಸೈಟಿಯ ಉಪಾಧ್ಯಕ್ಷ ಸೈಯ್ಯದ್ ಅಶ್ರಫ್ ಬರ್ಮಾವರ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು.

ಶಾಲಾ ಸಾಂಸ್ಕೃತಿಕ ಸಮಿತಿ ಸಂಚಾಲಕ ಮೌಲಾನ ಅಬ್ದಸ್ಸುಭಾನ್ ನದ್ವಿ ಪ್ರಸ್ತಾವಿಕವಾಗಿ ಮಾತನಾಡಿದರು. ಪ್ರೌಢಶಾಲೆ ಮುಖ್ಯಾಧ್ಯಾಪಕ ಮುಹಮ್ಮದ್ ರಝಾ ಮಾನ್ವಿ ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರು.

ವೇದಿಕೆಯಲ್ಲಿ ಕಾರ್ಯದರ್ಶಿ ತಲ್ಹಾ ಸಿದ್ದಿಬಾಪ, ಶಾಲಾ ಅಡಳಿತ ಮಂಡಳಿಯ ಮೌಲಾನ ಅಝೀಝುರ್ರಹ್ಮಾನ್ ನದ್ವಿ ರುಕ್ನುದ್ದೀನ್, ಶ್ರೀ ಗುರುಸುಧೀಂದ್ರ ಬಿಸಿಎ ಮತ್ತು ಬಿಬಿಎ ಕಾಲೇಜಿನ ಉಪಪ್ರಾಂಶುಪಾಲ ಶ್ರೀನಾಥ್ ಪೈ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ಅಸ್ಬಾತ್ ಮತ್ತು ಯೂಸೂಫ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಅಬ್ದುಲ್ಲಾ ಖಲಿಫಾ ಧನ್ಯವಾದ ಅರ್ಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News