ಚೀನಾ ಅಧ್ಯಕ್ಷರನ್ನು ಟೀಕಿಸಿದ ಮುಸ್ಲಿಮ್ ವೆಬ್‌ಸೈಟ್ ನಾಪತ್ತೆ
Update: 2016-12-14 21:12 IST
ಬೀಜಿಂಗ್, ಡಿ. 14: ಚೀನಾ ಮುಸ್ಲಿಮರ ಜನಪ್ರಿಯ ವೆಬ್‌ಸೈಟೊಂದರ ಅಂಕಣವೊಂದರಲ್ಲಿ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ರನ್ನು ಉದ್ದೇಶಿಸಿದ ವಿಮರ್ಶಾತ್ಮಕ ಪತ್ರವೊಂದು ಪ್ರಕಟವಾದ ಬಳಿಕ, ಶನಿವಾರದಿಂದ ಆ ವೆಬ್‌ಸೈಟೇ ನಾಪತ್ತೆಯಾಗಿದೆ.
ಹುಯಿ ಎಂಬ ಚೀನಾ ಮುಸ್ಲಿಮ್ ಸಮುದಾಯದ ಪ್ರಭಾವಿ ವೆಬ್‌ಸೈಟ್ ‘ಚೀನಾ ಮುಸ್ಲಿಮ್ ನೆಟ್’ ಸಿಗುತ್ತಿಲ್ಲ ಎಂಬುದಾಗಿ ಬಳಕೆದಾರರು ಹೇಳಿದ್ದಾರೆ.
ಕ್ಸಿಯನ್ನು ಉದ್ದೇಶಿಸಿದ ವಿಮರ್ಶಾತ್ಮಕ ಬಹಿರಂಗ ಪತ್ರವೊಂದನ್ನು ವೆಬ್‌ಸೈಟ್‌ನ ಚರ್ಚಾ ವೇದಿಕೆಯಲ್ಲಿ ಹಾಕಲಾಗಿತ್ತು. ಅದಾದ ಗಂಟೆಗಳ ಬಳಿಕ ವೆಬ್‌ಸೈಟೇ ನಾಪತ್ತೆಯಾಗಿದೆ.