ಬೈಕ್ ಕಳವು
Update: 2016-12-14 21:37 IST
ಮಂಗಳೂರು, ಡಿ.14: ನಗರದ ಸಿಟಿ ಸೆಂಟರ್‌ನ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಬೈಕನ್ನು ಕಳವು ಮಾಡಿದ ಬಗ್ಗೆ ವರುಣ ಎಂಬವರು ಬಂದರು ಠಾಣೆಗೆ ದೂರು ನೀಡಿದ್ದಾರೆ. ಡಿ.7ರಂದು ಬೈಕ್ ನಿಲ್ಲಿಸಿ ಮಂಗಳೂರು ವಿ.ವಿ.ಗೆ ತೆರಳಿ ಮರಳಿ ಬಂದಾಗ ಬೈಕ್ ಕಳವಾಗಿದ್ದು, ಬೈಕ್ ಸಿಗಬಹುದು ಎಂಬ ನಿರೀಕ್ಷೆಯಿಂದ ದೂರು ನೀಡುವಾಗ ವಿಳಂಬಗೊಂಡಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.