ಬಸ್ ಢಿಕ್ಕಿ: 6 ಮಂದಿಗೆ ಗಾಯ
Update: 2016-12-14 21:38 IST
ಮಂಗಳೂರು, ಡಿ.14: ಕೈಕಂಬದಿಂದ ಬಜ್ಪೆಗೆ ಚಲಿಸುತ್ತಿದ್ದ ವ್ಯಾನ್‌ಗೆ ಕೊಳಂಬೆ ಗ್ರಾಮದ ಕಜೆ ಪದವು ಎಂಬಲ್ಲಿ ಬಸ್ಸೊಂದು ಢಿಕ್ಕಿ ಹೊಡೆದ ಪರಿಣಾಮ ವ್ಯಾನ್‌ನಲ್ಲಿದ್ದ 6 ಮಂದಿಗೆ ಗಾಯವಾದ ಘಟನೆ ಡಿ.13ರಂದು ನಡೆದಿದೆ. ಈ ಬಗ್ಗೆ ಅಬೂಬಕರ್ ಎಂಬವರು ನೀಡಿದ ದೂರಿನಂತೆ ಬಜ್ಪೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.