×
Ad

ಮುಲ್ಕಿ : ಮಾಸಿಕ ಸಮಾನ್ಯ ಸಭೆ

Update: 2016-12-14 22:16 IST

ಮುಲ್ಕಿ, ಡಿ.14: ಕಳೆದ ಕೆಲ ದಿನಗಳ ಹಿಂದೆ ಹಳೆಯಂಗಡಿ ಬೊಳ್ಳೂರು ಬಳಿ ಅಪಘಾತವೊಂದರಲ್ಲಿ ಮೃತಪಟ್ಟ ರಿಕ್ಷಾ ಚಾಲಕ ಇಂದಿರಾನಗರ ನಿವಾಸಿ ಸಾದಿಕ್ ಎಂಬವರ ಮೃತದೇಹವನ್ನು ಶವ ಮಹಜರು ನಡೆಸಲು ಮುಲ್ಕಿ ಸಮದಾಯ ಆರೋಗಯ ಕೇಂದ್ರಕ್ಕೆ ತಂದಾಗ ಅಲ್ಲಿನ ವೈದ್ಯಾಧಿಕಾರಿ ಜಿತ್ ಶೆಟ್ಟಿ ಎಂಬವರು ಶವ ಮಹಜರು ನಡೆಸದೆ ಕುಟುಂಬಿಕರನ್ನು ಸತಾಯಿಸಿದ ಜೊತೆಗೆ ಧರ್ಮ ನಿಂದನೆ ಮಾಡಿದ ವಿಚಾರ ಇಂದು ಮುಲ್ಕಿ ನಗರ ಪಂಚಾಯತ್‌ನಲ್ಲಿ ನಡೆದ ಮಾಸಿಕ ಸಮಾನ್ಯ ಸಭೆಯಲ್ಲಿ ತೀವ್ರ ಚರ್ಚೆಗೆ ಎಡೆಮಾಡಿ ಕೊಟ್ಟಿತು.

  ಈ ಬಗ್ಗೆ ಹಿರಿಯ ವೈದ್ಯಾಧಿಕಾರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡ ಮುಲ್ಕಿ ನಗರ ಪಮಚಾಯತ್ ಸದಸ್ಯ ಬಿ.ಎಂ.ಆಸೀಫ್, ವೈದ್ಯಾಧಿಕಾರಿ ಅಜಿತ್ ಶೆಟ್ಟಿಯವರ ವರ್ತನೆಯನ್ನು ಖಂಡಿಸಿದರು.

ಈ ವೇಳೆ ಮಾತನಾಡಿದ ಸಮುದಾಯ ಕೇಂದ್ರದ ಹಿರಿಯ ವೈದ್ಯಾಧಿಕಾರಿ ಇರ್ಫಾನ್ ನಡೆದ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ಅದರಿಂದ ನೋವಾಗಿರುವವರು ಕ್ಷಮೆ ಕೋರುವುದಾಗಿ ಸಭೆಯಲ್ಲಿ ಕ್ಷಮೆ ಕೋರಿದರು.

  ಸಭೆ ಮುಂದುವರಿದು ಮಾತನಾಡಿದ ವೈದ್ಯ ಇರ್ಫಾನ್, ನಗರ ವ್ಯಾಪ್ತಿಯ ನಿರ್ಮಾಣ ಹಂತದ ವಸತಿ ಸಂಕೀರ್ಣಗಳಾದ ನೇಚರ್ ಟೆಂಪಲ್ ಹಾಗೂ ಲಿಂಗಪ್ಪಯ್ಯ ಕಾಡು ಪ್ರದೆಶಗಳಲ್ಲಿ ಹೆಚ್ಚು ಮಲೇರಿಯಾ ಪತ್ತೆಯಾಗಿವೆ. ಈ ಬಾರಿ 226 ಮಂದಿಯ ರಕ್ತ ಪರೀಕ್ಷೆ ನಡೆಸಲಾಗಿದ್ದು, ಈ ಪೈಕಿ 27 ಮಲೇರಿಯಾ ಪ್ರಕರಣಗಳು ಪತ್ತೆಯಾಗಿವೆ ಎಂದು ಮಾಹಿತಿ ನೀಡಿ, ನಗರ ವ್ಯಾಪ್ತಿಯಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚಿನ ಮಲೇರಿಯಾ ಪ್ರಕರಣಗಳು ಪತೆಯಾಗಿವೆ ಎಂದು ಮಾಹಿತಿ ನೀಡಿದರು.

  ಬಳಿಕ ಮಾತನಾಡಿದ ನಗರ ಪಂಚಾಯತ್ ಅಧ್ಯಕ್ಷ ಸುನಿಲ್ ಆಳ್ವ, ನಿರ್ಮಾಣ ಹಂತದ ವಸತಿ ಸಂಕೀರ್ಣಗಳಿಗೆ ಗುರುವಾರ ನಪಂ ಆಡಳಿತ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ. ಮುಲ್ಕಿ ಸಮುದಾಯ ಆರೋಗ್ಯ ಕೇಂದ್ರದ ಪರಿಸರದಲ್ಲಿ ಕಾಡು ಬೆಳೆದಿದ್ದು ಅದನ್ನು ತೆಗೆದು ಸ್ವಚ್ಛ ಗೊಳಿಸುವಂತೆ ವೈದ್ಯಾಧಿಕಾರಿಗೆ ಸೂಚನೆ ನೀಡಿದರು.

   ಸರಕಾರದ ಸೂಚನೆಯಂತೆ ಪ್ರತಿ 3 ವರ್ಷಕ್ಕೊಮ್ಮೆ ಆಸ್ತಿ ತೆರಿಗೆ ಹೆಚ್ಚಳ ಮಾಡಬೇಕಿದ್ದು, ಬುಧವಾರ ನಡೆದ ನಪಂ ಮಾಸಿಕ ಸಭೆಯಲ್ಲಿ ಶೇ.20 ರಷ್ಟು ಹೆಚ್ಚಿಸಲು ಸರ್ವಾನುಮತದಿಂದ ನಿರ್ಧರಿಸಲಾಯಿತು.

 ಕಳೆದ ಹಲವು ತಿಂಗಳಿಗಳಿಂದ ಹಳೆಯಂಗಡಿ ಗ್ರಾಮ ಪಂಚಾಯತ್ ತುಂಬೆ ನೀರಿನ ಹಣ ಬಾಕಿ ಇದ್ದರೂ ಹಳೆಯಂಗಡಿ ಪಂಚಾಯತ್‌ಗೆ ನೀರು ನೀಡುತ್ತಿರುವ ಬಗ್ಗೆ ಆಕ್ಷೇಪಿಸಿದ ಸದಸ್ಯರು, ಈಗಾಗಲೇ ಹಳೆಯಂಗಡಿ ಪಂಚಾಯತ್ ತುಂಬೆ ನೀರಿನ ಬಾಕಿ ಸುಮಾರು 33 ಲಕ್ಷ ರೂ. ದವರೆಗೆ ಇದೆ. ಇದರಿಂದ ಮುಲ್ಕಿ ನಗರ ಪಂಂಚಾಯತ್‌ಗೆ ತೊಂದರೆಯಾಗುತ್ತಿದೆ ಎಂದು ದೂರಿದರು. ಆ ವೇಳೆ ಸದಸ್ಯ ಆಸೀಫ್ ಮಧ್ಯ ಪ್ರವೇಶಿಸಿ ಮುಲ್ಕಿ ಹಾಗೂ ಹಳೆಯಂಗಡಿಗೆ ತುಂಬೆ ನೀರಿನ ಬೇರೆಯೇ ಮೀಟರ್ ಅಳವಡಿಕೆಗೆ ಶಾಸಕರ ಮನವೊಲಿಸಲು ಅಧ್ಯಕ್ಷ ಸುನಿಲ್ ಆಳ್ವ ಅವರಿಗೆ ಸಲಹೆ ನೀಡಿದರು.

  ನಗರ ವ್ಯಾಪ್ತಿಯಲ್ಲಿ ಬ್ಯಾನರ್ ನಿಷೇಧ ವಿದ್ದರೂ ನಗರಪಾಲಿಕೆ ವ್ಯಾಪ್ತಿಯಲ್ಲಿ ನಿಷೇಧವಿಲ್ಲದ ಕಾರಣ ಸಂಪೂರ್ಣ ಪ್ಲಾಸ್ಟಿಕ್ ನಿಷೇಧ ಸಾಧ್ಯವಾಗಿಲ್ಲ. ಈ ಬಗ್ಗೆ ಕಾನೂನು ಸಡಿಲಿಕೆ ಸಾಧ್ಯವೇ ಎಂದು ಸದಸ್ಯ ಪುತ್ತುಬಾವ ಸಭೆಯನ್ನು ಪ್ರಶ್ನಿಸಿದರು.

ಈ ಬಗ್ಗೆ ಮಾತನಾಡಿದ ಅಧ್ಯಕ್ಷರು, ನಪಂ ಕಾನೂನು ಪಾಲನೆ ಮಾಡುತ್ತಿದೆ. ಇತರರ ಬಗ್ಗೆ ನಾವೇನೂ ಮಾಡುವಂತಿಲ್ಲ. ಆದಾಗ್ಯೂ ಈ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತರಲಾಗುವುದು ಎಂದು ಎಂದು ಸಭೆ ನಿರ್ಧರಿಸಿತು.

ಒಟ್ಟಾರೆಯಾಗಿ ಮುಲ್ಕಿ ನಗರ ಪಂಚಾಯತ್ ಮಾಸಿಕ ಸಭೆ ಮುಲ್ಕಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಧಿಕಾರಿಯ ದುರ್ವರ್ತನೆ ಹಾಗೂ ಧರ್ಮನಿಂದನೆ, ಮಲೇರಿಯಾ ನಿಯಂತ್ರಣ, ಹಳೆಯಂಗಡಿ ಪಂಚಾಯತ್‌ನಿಂದ ತುಂಬೆ ನೀರಿನ ಬಾಕಿ, ಆಸ್ತಿ ತೆರಿಗೆ ಹೆಚ್ಚಳ, ಪ್ಲಾಸ್ಟಿಕ್ ಬ್ಯಾನರ್ ನಿಷೇಧ ಮುಂತಾದ ವಿಚಾರಗಳ ಬಗ್ಗೆ ತೀವ್ರ ಚರ್ಚೆ ನಡೆದು ಸಮಾಪ್ತಿಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News