×
Ad

ಡಿ. 20ರಂದು ಅಳಕೆಮಜಲಿನಲ್ಲಿ ಮೀಲಾದ್ ಕಾನ್ಫೆರೆನ್ಸ್

Update: 2016-12-14 22:25 IST

ಬಂಟ್ವಾಳ,ಡಿ.14: ಎಸ್‌ವೈಎಸ್ ಅಳಕೆಮಜಲು ಶಾಖೆಯ ಆಶ್ರಯದಲ್ಲಿ ಅಬ್ದುರ್ರಹ್ಮಾನ್ ಹಾಜಿರವರ ಸಹಕಾರದಲ್ಲಿ ಮೀಲಾದ್ ಕಾನ್ಫೆರೆನ್ಸ್ ಡಿ. 20ರಂದು ಅಳಕೆಮಜಲಿನಲ್ಲಿ ನಡೆಯಲಿದೆ.

ಬುರ್ದಾ ಮಜ್ಲೀಸ್‌ನಲ್ಲಿ ಶೈಖುನಾ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ದುಆ ಆಶೀರ್ವಚನ ನೀಡಲಿದ್ದು, ಮುಹಮ್ಮದ್ ಶರೀಫ್ ಸಖಾಫಿ ಉದ್ಘಾಟಿಸಲಿದ್ದಾರೆ. ಅಲ್ ಹಾಜಿ ಮುಹಮ್ಮದ್ ಖಾಸಿಮಿ ಅಧ್ಯಕ್ಷತೆ ವಹಿಸಲಿದ್ದಾರೆ. ಸೌಹಾರ್ದ ಸಂಗಮವನ್ನು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಉದ್ಘಾಟಿಸಲಿದ್ದಾರೆ. ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೆರ ಅಧ್ಯಕ್ಷತೆ ವಹಿಸಲಿದ್ದಾರೆ. ಸಚಿವ ಯು.ಟಿ ಖಾದರ್ ದಿಕ್ಸೂಚಿ ಭಾಷಣ ಮಾಡಲಿದ್ದು, ಎಸ್‌ಎಸ್‌ಎಫ್ ಜಿಲ್ಲಾ ಉಪಾಧ್ಯಕ್ಷ ಸಿರಾಜುದ್ದೀನ್ ಸಖಾಫಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ.ಮೀಲಾದ್ ಸಂಗಮದಲ್ಲಿ ಅಸೈಯದ್ ಮಹಮ್ಮದ್ ತಂಙಳ್ ಕಬಕ ದುಅ ನೀಡಲಿದ್ದು, ಉಸ್ಮಾನ್ ಸಅದಿ ಪಟ್ಟೋರಿ ಅಧ್ಯಕ್ಷತೆ ವಹಿಸಲಿದ್ದಾರೆ. ಉಮರ್ ಸಖಾಫಿ ಕಂಬಳಬೆಟ್ಟು ಉದ್ಘಾಟಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News