ಪತ್ನಿ, ಪುತ್ರಿಯ ಮೇಲೆ ಹಲ್ಲೆ ನಡೆಸುವ ದಿಲ್ಲಿ ಹೈಕೋರ್ಟ್ ವಕೀಲನ ವೀಡಿಯೋ ಪೊಲೀಸರಿಗೆ ನೀಡಿದ ಇನ್ನೊಬ್ಬ ಪುತ್ರಿ

Update: 2016-12-15 06:29 GMT

ಹೊಸದಿಲ್ಲಿ, ಡಿ.15: ದೆಹಲಿ ಹೈಕೋರ್ಟಿನ ವಕೀಲರೊಬ್ಬರು ತಮ್ಮ ಪತ್ನಿ ಹಾಗೂ ಪುತ್ರಿಯನ್ನು ನಿಂದಿಸಿ ಹಲ್ಲೆಗೈಯ್ಯುತ್ತಿರುವ ವೀಡಿಯೊವೊಂದನ್ನುಪೊಲೀಸರಿಗೆ ನೀಡಲಾಗಿದೆ. ಈ ವೀಡಿಯೊವನ್ನು ಆ ವಕೀಲರ ಇನ್ನೊಬ್ಬಳು ಪುತ್ರಿ ಚಿತ್ರೀಕರಿಸಿದ್ದಳು.

ಈ ಒಂದು ನಿಮಿಷ ಅವಧಿಯ ವಿಡಿಯೋದಲ್ಲಿ ವಕೀಲ ತನ್ನ ಪುತ್ರಿಗೆ ಹೊಡೆಯುವುದು ಕಾಣಿಸುತ್ತದೆ. ಆಕೆ ನೆಲಕ್ಕುರುಳುತ್ತಿದ್ದಂತೆಯೇ ಆತ ಅವಳನ್ನು ದರದರನೆ ಎಳೆದು ಈ ನಡುವೆ ಹೊಡೆಯುತ್ತಿರುವ ದೃಶ್ಯವಿದೆ.

ವಕೀಲ ತನ್ನನ್ನು 15 ವರ್ಷಗಳ ಹಿಂದೆ ಮದುವೆಯಾದಂದಿನಿಂದ ತನಗೆ ಹೊಡೆಯುತ್ತಿದ್ದಾನೆಂದು ಆತನ ಪತ್ನಿ ಆರೋಪಿಸಿದ್ದಾಳಲ್ಲ. ಆತ ತನ್ನ ಇಬ್ಬರು ಪುತ್ರಿಯರ ಮೇಲೂ ಸತತ ಹಲ್ಲೆ ನಡೆಸುತ್ತಾನೆ ಎಂದಿದ್ದಾಳೆ. ತನಗೆ ಗಂಡು ಮಗುವಾಗಿಲ್ಲವೆಂಬ ಕಾರಣಕ್ಕೆ ಆತ ಹೀಗೆ ಮಾಡುತ್ತಿದ್ದಾನೆಂದು ವಕೀಲನ ಪತ್ನಿ ಹೇಳುತ್ತಿದ್ದಾಳೆ. ಪುತ್ರಿಯರಿಬ್ಬರೂ ದಿಲ್ಲಿ ಖಾಸಗಿ ಶಾಲೆಯೊಂದರ ವಿದ್ಯಾರ್ಥಿನಿಯರಾಗಿದ್ದು ಅವರ ಕುಟುಂಬ ದಕ್ಷಿಣ ದಿಲ್ಲಿಯ ಪ್ರತಿಷ್ಠಿತ ವಸಂತ್ ಕುಂಜ್ ಪ್ರದೇಶದ ತನ್ನ ಮನೆಯಲ್ಲಿ ವಾಸವಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News