×
Ad

ನಕ್ಸಲರೊಂದಿಗೆ ಸಂಬಂಧ ಆರೋಪಿಸಿ ಸರಕಾರಿ ನೌಕರನ ಅಮಾನತು

Update: 2016-12-15 12:01 IST

ಕ್ಯಾಲಿಕಟ್, ಡಿಸೆಂಬರ್ 15: ನಿಲಂಬೂರ್ ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟವರ ಮೃತದೇಹಗಳು ಸಂಬಂಧಿಕರಿಗೆ ದೊರಕಲು ಕೆಲಸ ಮಾಡಿದ ಮಾನವಹಕ್ಕು ಕಾರ್ಯಕರ್ತ ಹಾಗೂ ಸರಕಾರಿ ಉದ್ಯೋಗಿಯನ್ನು ಅಮಾನತು ಗೊಳಿಸಲಾಗಿದೆ ಎಂದು ವರದಿಯಾಗಿದೆ. ಕ್ಯಾಲಿಕಟ್ ಸರಕಾರಿ ಪಾಲಿಟೆಕ್ನಿಕ್ ಕ್ಲಾರ್ಕ್ ರಜೀಷ್ ಕೊಲ್ಲಕಂಡಿ ಎಂಬವರನ್ನು ಸಿಟಿಪೊಲೀಸ್ ಕಮಿಷನರ್‌ರ ಸೂಚನೆಪ್ರಕಾರ ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕರು ಸಸ್ಪೆಂಡ್ ಮಾಡಿದ್ದಾರೆ. ಜನಪರ ಮಾನವಹಕ್ಕು ಆಂದೋಲನದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ರಜೀಷ್ ಕೆಲಸ ಮಾಡುತ್ತಿದ್ದರು.
ನವೆಂಬರ್ 29ಕ್ಕೆ ಕಮಿಷನರ್ ಉಮ ಬೆಹ್ರ ಅವರು ರಜೀಷ್‌ರನ್ನು ಸಸ್ಪೆಂಡ್ ಮಾಡಬೇಕೆಂದು ಆಗ್ರಹಿಸಿ ತಾಂತ್ರಿಕ ಶಿಕ್ಷಣ ನಿರ್ದೇಶಕರಿಗೆ ಪತ್ರ ಬರೆದಿದ್ದರು. ಯುಎಪಿಯ ಪ್ರಕಾರ ಕೇಸು ಹಾಕಬಹುದಾದ ಗಂಭೀರ ಅಪರಾಧದಲ್ಲಿ ರಜೀಷ್ ಪಾಲ್ಗೊಂಡಿದ್ದಾರೆಂದು ಪೊಲೀಸರು ಆರೋಪಿಸಿದ್ದಾರೆ.

1980ರ ಸರಕಾರಿ ಉದ್ಯೋಗಿಗಳ ನಡಾವಳಿ ನಿಯಮ 10(ಕೆಸಿಎಸ್(ಸಿಸಿಎ) ಪ್ರಕಾರ ಕ್ರಮಕೈಗೊಳ್ಳಲಾಗಿದೆ ಎಂದು ಅಮಾನತು ಆದೇಶದಲ್ಲಿ ತಿಳಿಸಲಾಗಿದೆ. ಆದರೆ ಕೇರಳದ ಯಾವುದಾದರೊಂದು ಪೊಲೀಸ್ ಠಾಣೆಯಲ್ಲಿ ತನ್ನ ವಿರುದ್ಧ ಯುಎಪಿಎ ಕೇಸು ದಾಖಲುಗೊಂಡಿರುವುದು ತನಗೆ ಗೊತ್ತಿಲ್ಲ ಎಂದು ರಜೀಷ್ ಪ್ರತಿಕ್ರಯಿಸಿದ್ದಾರೆ. ಇದು ಪ್ರತೀಕಾರ ಕ್ರಮವಾಗಿದೆ. ಪೋರಾಟ್ಟಂ ಎಂಬ ಆಂದೋಲನಕ್ಕೂ ತನಗೂ ಸಂಬಂಧವಿಲ್ಲ. ಜನಪರ ಮಾನವಹಕ್ಕು ಆಂದೋಲನದ ಕಾರ್ಯಕರ್ತ ಮಾತ್ರ ತಾನು ಎಂದು ರಜೀಷ್ ಹೇಳಿರುವುದಾಗಿ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News