×
Ad

ಫೈಝಲ್ ಹತ್ಯೆ: ಆರೋಪಿಗಳಿಗೆ ಜಾಮೀನು ನಿರಾಕರಣೆ

Update: 2016-12-15 13:01 IST

ತಿರೂರಂಞಾಡಿ, ಡಿ. 15: ಕೊಡಿಂಞಿಯ ಫೈಝಲ್ ಹತ್ಯೆ ಪ್ರಕರಣದಲ್ಲಿ ರಿಮಾಂಡ್‌ನಲ್ಲಿರುವ ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿ ಪರಪ್ಪನಂಗಾಡಿ ಫಸ್ಟ್‌ಕ್ಲಾಸ್ ಮ್ಯಾಜಿಸ್ಟ್ರೇಟ್ ಕೋರ್ಟು ತಳ್ಳಿಹಾಕಿದೆ. ರಿಮಾಂಡ್ ಅವಧಿ ಬುಧವಾರ ಕೊನೆಗೊಳ್ಳಲಿದ್ದು ಈ ಹಿನ್ನೆಲೆಯಲ್ಲಿ ಆರೋಪಿಗಳು ಜಾಮೀನು ಅರ್ಜಿಯನ್ನು ಸಲ್ಲಿಸಿದ್ದರು ಎಂದುವರದಿಯಾಗಿದೆ.

ಪೈಝಲ್ ಕೊಲೆಗೆ ಸಂಚು ಹೆಣದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಫೈಝಲ್‌ರ ಸಹೋದರಿಯ ಪತಿ ಕೊಡಿಂಞಿ ಚುಳ್ಳಿಕುನ್ನ್ ಪುಲ್ಲಾಣಿ ವಿನೋದ್(39), ಫೈಝಲ್‌ನ ತಾಯಿಯ ಸಹೋದರನ ಮಗ ಪುಲ್ಲಾಣಿ ಸಜೀಷ್(32), ಕೊಲೆಕೃತ್ಯದ ಮುಖ್ಯ ಸೂತ್ರಧಾರಿ ಪುಳ್ಳಿಕ್ಕಲ್‌ಹರಿದಾಸನ್(30), ಈತನ ಅಣ್ಣ ಶಾಜಿ(39), ಚಾನತ್ತ ಸುನೀಲ್(39), ಕಳತ್ತಿಲ್ ಪ್ರದೀಪ್ ಯಾನೆ ಕುಟ್ಟನ್(32), ಪಾತ್ತಿಂಙಲ್ ಪಳ್ಳಿಪ್ಪಡಿ ಲಿಜೀಷ್ ಯಾನೆ ಲಿಜು(27), ಪರಪ್ಪನಂಙಾಡಿ ನಿವೃತ್ತಿ ಸೈನಿಕ ಕೋಟ್ಟಯಿಲ್ ಜಯಪ್ರಕಾಶ್(50) ಎಂಬವರ ರಿಮಾಂಡ್ ಮುಂದುವರಿದಿದೆ.

ಮುಖ್ಯ ಆರೋಪಿ ಕುಟ್ಟೂಸ್ ಯಾನೆ ಅಪ್ಪು, ಕುಟ್ಟಪ್ಪು, ಬಾಬು ರಿಮಾಂಡ್‌ನಲ್ಲಿದ್ದಾರೆ ಎಂದು ವರದಿತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News