ಮುಂಬೈನಲ್ಲಿ ಮನೆ ಕುಸಿತ; ಮೂವರ ಸಾವು ; 11 ಮಂದಿಗೆ ಗಾಯ
Update: 2016-12-15 13:06 IST
ಮುಂಬೈ, ಡಿ.15: ಮನೆಯೊಂದು ಕುಸಿದು ಬಿದ್ದ ಪರಿಣಾಮವಾಗಿ ಮೂವರು ಮೃತಪಟ್ಟು , 11 ಮಂದಿ ಗಾಯಗೊಂಡ ಘಟನೆ ಮುಂಬೈನ ಗೋವಂಡಿಯ ಸಾಯಿ ಬಾಬಾ ನಗರದಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ.
ಮನೆಯೊಳಗಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಪರಿಣಾಮವಾಗಿ ಬೆಂಕಿ ಹತ್ತಿಕೊಂಡು ಮನೆಯೊಳಗೆ ವ್ಯಾಪಿಸಿಕೊಂಡಿತೆನ್ನಲಾಗಿದೆ. ಬಳಿಕ ಒಂದಸ್ತಿನ ಮನೆಯ ಕಟ್ಟಡ ಕುಸಿದು ಬಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಒಟ್ಟು 13 ಮಂದಿ ಗಾಯಗೊಂಡರು. ಈ ಪೈಕಿ 7 ಮಂದಿ ಮಕ್ಕಳು ಸೇರಿದ್ದಾರೆ.ಇವರಲ್ಲಿ ಗಂಭೀರ ಗಾಯಗೊಂಡ ಮೂವರು ಮೃತಪಟ್ಟಿದ್ದಾರೆ.