×
Ad

ಕರ್ನಾಟಕ ಬ್ಲಡ್ ಹೆಲ್ಪ್ ಲೈನ್ ಬೆಳ್ತಂಗಡಿ ವಲಯದಿಂದ ಹಣ್ಣು ಹಂಪಲು ವಿತರಣೆ

Update: 2016-12-15 15:21 IST

ಬೆಳ್ತಂಗಡಿ, ಡಿ.15: ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿ ವಿಶಿಷ್ಟ ರೀತಿಯಲ್ಲಿ ವಿಶ್ವ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ ಅ)ರವರ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.

ಅಕ್ಬರ್ ಬೆಳ್ತಂಗಡಿಯ ನೇತೃತ್ವದಲ್ಲಿ  ಬ್ಲಡ್ ಹೆಲ್ಪ್ ಲೈನ್ ಬೆಳ್ತಂಗಡಿ ವಲಯದ ಕಾರ್ಯಕರ್ತರು ಹಾಗೂ ಸ್ಥಳೀಯ ನಾಯಕರ ನೆರವಿನೊಂದಿಗೆ ಹಣ್ಣು ಹಂಪಲು ವಿತರಿಸಲಾಯಿತು.

ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಯಾವುದೇ ಸಮಯದಲ್ಲಿ ಯಾವುದೇ ಗ್ರೂಪಿನ ರಕ್ತ ಬೇಕಾದಲ್ಲಿ ತಕ್ಷಣ ಸ್ಪಂದಿಸುತ್ತದೆ. ಆದುದರಿಂದ ಹೊರ ರಾಜ್ಯ ಹಾಗೂ ಜಿಲ್ಲೆಯಿಂದ ಬರುವ ರೋಗಿಗಳಿಗೆ ರಕ್ತದ ಅವಶ್ಯಕತೆ ಇರುತ್ತದೆ. ಇದನ್ನು ಮನಗಂಡು ಅವರಿಗೆ ಬೇಕಾದಂತಹ ರಕ್ತದ ಅವಶ್ಯಕತೆಯನ್ನ ಪೂರೈಸಲು  ಬ್ಲಡ್ ಹೆಲ್ಪ್ ಲೈನ್ ಗೆ ಸಾಧ್ಯವಾಗುತ್ತಿದೆ.

ಕಡಿಮೆ ಅವಧಿಯಲ್ಲಿ ಸ್ನೇಹಿತರು ಸೇರಿ ಪ್ರಾರಂಭಿಸಿದ ಸಂಸ್ಥೆ ಇದೀಗ ಬೆಂಗಳೂರು, ಕುಂದಾಪುರ, ಉಡುಪಿ ಸೇರಿದಂತೆ ರಾಜ್ಯದ್ಯಾಂತ ತುರ್ತು ರಕ್ತದಾನ ಶಿಬಿರಗಳನ್ನು ನಡೆಸಿದ್ದೇವೆ. ಮುಂದೆ ಸಂಸ್ಥೆಯು ರೋಗಿಗಳಿಗೆ ನೆರವಾಗಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಲಿದೆ ಎಂದು ಕರ್ನಾಟಕ ಬ್ಲಡ್ ಹೆಲ್ಪ್ ಲೈನ್  ಬೆಳ್ತಂಗಡಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News