ಉತ್ತರಪ್ರದೇಶದಲ್ಲಿ ಕಾಂಗ್ರೆಸ್‌ನೊಂದಿಗೆ ಕೈಜೋಡಿಸಲು ಸಿದ್ಧವಾದ ಸಮಾಜವಾದಿ ಪಕ್ಷ
ಲಕ್ನೊ,ಡಿ. 15: ಕಾಂಗ್ರೆಸ್ ನೊಂದಿಗೆ ಸಮಾಜವಾದಿ ಪಾರ್ಟಿ ಮೈತ್ರಿ ಬೆಳೆಸಲು ಮುಂದಾಗಿದೆ ಎಂಬ ಸುದ್ದಿಯನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ದೃಢೀಕರಿಸಿದ್ದಾರೆಂದು ವರದಿಯಾಗಿದೆ. ಮೈತ್ರಿಯ ವಿಷಯದಲ್ಲಿ ನೇತಾರರು ಚರ್ಚೆ ನಡೆಸುವರು ಎಂದು ಪಾರ್ಟಿ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ್ ಅಂತಿಮ ತೀರ್ಮಾನಕ್ಕೆ ಬರುವರೆಂದು ಅಖಿಲೇಶ್ ಬುಧವಾರ ಹೇಳಿದ್ದಾರೆ.
ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಗೆಲುವು ಖಚಿತ. ಸಖ್ಯ ಮಾಡಿಕೊಂಡು ಸ್ಪರ್ಧಿಸಿದರೆ 300 ಸೀಟುಗಳು ಗ್ಯಾರಂಟಿ ಎಂದು ಅಖಿಲೇಶ್ ಭರವಸೆ ವ್ಯಕ್ತಪಡಿಸಿದ್ದಾರೆ.
2012ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಬಿಎಸ್ಪಿಗೆ ವೋಟು ನೀಡಿತ್ತು. ಇದಕ್ಕೆ ಪ್ರತಿಫಲವಾಗಿ 2014ರಲ್ಲಿ ಬಿಎಸ್ಪಿ ಬಿಜೆಪಿಗೆ ವೋಟು ನೀಡಿತು ಎಂದು ಅಖಿಲೇಶ್ ಯಾದವ್ ಆರೋಪಿಸಿದ್ದಾರೆ. ಬಿಎಸ್ಪಿ ನಾಯಕಿ ಮಾಯಾವತಿ ಬಿಜೆಪಿಯೊಂದಿಗೆ ದಿಲ್ಲಿಯಲ್ಲಿ ಮಾತುಕತೆ ನಡೆಸುತ್ತಿದ್ದಾರೆಂದು ಅವರು ಹೇಳಿದ್ದಾರೆ.
ರಾಜ್ಯದಲ್ಲಿ ಶೇ.18ರಷ್ಟು ಇರುವ ಮುಸ್ಲಿಮ್ ಸಮುದಾಯದ ವೋಟು ಈಗಲೂ ಪಾರ್ಟಿ ಪರವಿದೆ. ದೊಡ್ಡ ಪ್ರಮಾಣದಲ್ಲಿ ರಾಜ್ಯದ ವಿವಿಧ ಕಡೆಗಳಲ್ಲಿ ಅಭಿವೃದ್ಧಿಕಾರ್ಯಗಳನ್ನು ಮಾಡಲಾಗಿದೆ ಎಂದು ಅಖಿಲೇಶ್ ಹೇಳಿರುವುದಾಗಿ ವರದಿಯಾಗಿದೆ.