×
Ad

ಸಹಕಾರಿ ವಲಯದ ನಾಶಕ್ಕೆ ಕೇಂದ್ರ ಸರಕಾರದ ಪ್ರಯತ್ನ : ಕಡಕಂಪಳ್ಳಿ ಸುರೇಂದ್ರನ್

Update: 2016-12-15 18:09 IST

 ಕಾಸರಗೋಡು , ಡಿ.15 :  ಸಹಕಾರಿ ವಲಯದ ನಾಶಕ್ಕೆ ನಡೆಯುತ್ತಿರುವ ಹುನ್ನಾರವನ್ನು ಯಾವುದೇ ಬೆಲೆ ತೆತ್ತು ಸಂರಕ್ಷಿಸಲು ರಾಜ್ಯ ಸರಕಾರ ಮತ್ತು  ಸಾರ್ವಜನಿಕರು ಒಗ್ಗಟ್ಟಾಗಲಿದ್ದಾರೆ ಎಂದು ಕೇರಳ ಸಹಾಕಾರಿ ಮತ್ತು ಪ್ರವಾಸೋದ್ಯಮ ಸಚಿವ  ಕಡಕಂಪಳ್ಳಿ ಸುರೇಂದ್ರನ್ ಹೇಳಿದರು.

ಅವರು ಕೇರಳ ಸರಕಾರದ ಸಹಕಾರಿ  ವಲಯದ  ಸಂರಕ್ಷಣಾ  ಅಭಿಯಾನದಂಗವಾಗಿ ನೀಲೇಶ್ವರ  ಶ್ರೀವತ್ಸಾ ಸಭಾಂಗಣದಲ್ಲಿ  ಗುರುವಾರ ನಡೆದ  ಜಿಲ್ಲಾ ಮಟ್ಟದ    ಸಮಾವೇಶ ವನ್ನು  ಉದ್ಘಾಟಿಸಿ ಮಾತನಾಡುತ್ತಿದ್ದರು.

60  ವರ್ಷಗಳ   ಸೇವೆ  ಸಲ್ಲಿಸಿರುವ  ಕೇರಳದ   ಸಹಕಾರಿ ವಲಯವನ್ನು  ನಾಶಪಡಿಸಲು ಕೇಂದ್ರ ಸರಕಾರ ಪ್ರಯತ್ನಿಸುತ್ತಿದೆ.  ಕಾಳ ಧನ ತಡೆಗೆ ಜನರ ಎಲ್ಲಾ  ರೀತಿಯ ಪ್ರೋತ್ಸಾಹ ಇದೆ.  ನೋಟುಗಳ ನಿಷೇಧ ಹೆಸರಲ್ಲಿ  ಬಡಜನರನ್ನು  ಬೀದಿಗೆ ತಳ್ಳಲಾಗಿದೆ. ರಾಜ್ಯದ  ಎಲ್ಲಾ  ಕುಟುಂಬಗಳಿಗೆ   ಸಹಕಾರಿ ವಲಯಗಳಲ್ಲಿ ಖಾತೆ ತೆರೆಯಲು ಕ್ರಮ  ತೆಗೆದುಕೊಳ್ಳಲಾಗುವುದು. ಸಹಕಾರಿ ವಲಯದ ಸಂರಕ್ಷಣೆಗೆ ರಾಜ್ಯ  ಸರಕಾರ ಕಟಿಬದ್ಧವಾಗಿದೆ ಎಂದು ಸಚಿವರು ಹೇಳಿದರು.

ನೀಲೇಶ್ವರ ಶಾಸಕ ಎಂ. ರಾಜಗೋಪಾಲ್  ಅಧ್ಯಕ್ಷತೆ  ವಹಿಸಿದ್ದರು.

ಜಿಲ್ಲಾ ಸಹಕಾರಿ ಬ್ಯಾ೦ಕ್  ಅಧ್ಯಕ್ಷ ಪಿ .ಸಿ   ರಾಮನ್ ,  ನೀಲೇಶ್ವರ  ನಗರಸಭಾ ಅಧ್ಯಕ್ಷ   ಜಯರಾಜನ್ , ಕೆ .ಪಿ ಸತೀಶ್ಚಂದ್ರನ್,  ಕೆ .ಪಿ  ಕುಞ ಕಣ್ಣನ್ ,ಕೆ . ವಿ ಕುಞ ರಾಮನ್ . ಎಂ . ನಾರಾಯಣನ್,  ರಾಜ್ಯ ಸಹಕಾರಿ ಬ್ಯಾ೦ ಕ್  ನಿರ್ದೇಶಕ  ಬಾಲಕೃಷ್ಣ ವೊರ್ಕೊಡ್ಲು  ಮೊದಲಾದವರು ಉಪಸ್ಥಿತರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News