ತಣ್ಣೀರುಬಾವಿ: ದಲಿತರ ಕುಂದುಕೊರತೆ ಸಭೆ
ಮಂಗಳೂರು, ಡಿ.15: ನಗರ ಹೊರವಲಯದ ತಣ್ಣೀರುಬಾವಿಯಲ್ಲಿ ದಲಿತರ ಕುಂದುಕೊರತೆ ಸಭೆಯು ಠಾಣಾಧಿಕಾರಿ ಸುಂದರಿಯ ಅಧ್ಯಕ್ಷತೆಯಲ್ಲಿ ನಡೆಯಿತು.
ತನಗೆ 2 ಕೋಟಿಯ ಹಳೆ ನೋಟಿನ ಕಂತೆ ಸಿಕ್ಕಿದೆ ಎಂದು ಅಪಪ್ರಚಾರ ಮಾಡಿ ಮಾನಸಿಕ ಹಿಂಸೆ ನೀಡಲಾಗಿದೆ ಎಂದು ದೀಪಿಕಾ ಎಂಬವರು ಅಳಲುತೋಡಿಕೊಂಡರು.ಇದರ ಹಿಂದೆ ದಲಿತ ಮುಖಂಡ ಎಂದು ಹೇಳಿಕೊಳ್ಳುವ ವ್ಯಕ್ತಿಯೊಬ್ಬರ ಪಾತ್ರವಿರುವ ಗುಮಾನಿ ಇದೆ ಎಂದು ಅವರು ಆರೋಪಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಠಾಣಾಧಿಕಾರಿ, ಹಣ ಸಿಕ್ಕಿರುವ ಬಗ್ಗೆ ಅಪಪ್ರಚಾರ ಮಾಡುವವರ ವಿರುದ್ಧ ಕ್ರಮ ಜರಗಿಸಲಾಗುವುದು ಎಂದರು.
ಅಕ್ರಮ ಸಾರಾಯಿ ಮಾರಾಟ, ಗಾಂಜಾಸೇವನೆಯ ಬಗ್ಗೆ ಜನರು ಮಾಹಿತಿ ನೀಡಿದರು.
ಇಲ್ಲಿನ ಸರಕಾರಿ ಸಭಾಭವನವಿದ್ದರೂ ಕೂಡ ಮರಳಿನ ಮೇಲೆ ಕುಳಿತುಕೊಂಡು ಸಭೆ ನಡೆಸುವಂತಾಗಿರುವುದು ಬೇಸರದ ಸಂಗತಿಯಾಗಿದೆ ಎಂದು ಸಾರ್ವಜನಿಕರು ದೂರಿದರು.
ಸಭೆಯಲ್ಲಿ ದಲಿತ ಹಕ್ಕುಗಳ ಸಮಿತಿಯ ಜಿಲ್ಲಾ ಸಂಚಾಲಕ ಲಿಂಗಪ್ಪ ನಂತೂರು, ಉಪಾಧ್ಯಕ್ಷ ತಿಮ್ಮಯ್ಯ ಕೊಂಚಾಡಿ, ಕೃಷ್ಣ ತಣ್ಣೀರುಬಾವಿ, ಬೇಬಿ ತಣ್ಣೀರುಬಾವಿ, ಶಮೀಮಾ ಬಾನು, ಜಯಣ್ಣ ತನ್ನೀರುಬಾವಿ, ಮುಹಮ್ಮದ್ ಅಝೀಝ್ ಉಪಸ್ಥಿತರಿದ್ದರು.