×
Ad

ಚಾಕೊಲೇಟ್ ಟಬ್‌ಗೆ ಬಿದ್ದು ಮಹಿಳೆ ಸಾವು

Update: 2016-12-15 18:21 IST

ಮಾಸ್ಕೋ,ಡಿ.15: ಚಾಕೊಲೇಟ್ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ 24ರ ಹರೆಯದ ಮಹಿಳೆಯೋರ್ವಳು ಕರಗಿದ ಚಾಕೊಲೇಟ್ ತುಂಬಿದ್ದ,ಮಿಕ್ಸರ್ ಅಳವಡಿ ಸಲಾಗಿದ್ದ ಬೃಹತ್ ಕಡಾಯಿಯಲ್ಲಿ ಬಿದ್ದು ಸಾವನ್ನಪ್ಪಿದ್ದಾಳೆ. ಮಿಕ್ಸರ್‌ಗೆ ಸಿಲುಕಿ ಆಕೆಯ ದೇಹದ ಹೆಚ್ಚಿನ ಭಾಗಗಳು ಗುರುತು ಹಿಡಿಯಲಾಗದಷ್ಟು ಚೂರುಚೂರಾಗಿ ಕತ್ತರಿಸಲ್ಪಟ್ಟಿದ್ದು, ಕಡಾಯಿಯ ಹೊರಗಿದ್ದ ಎರಡು ಕಾಲುಗಳಷ್ಟೇ ಉಳಿದುಕೊಂಡಿವೆ.

ಇಲ್ಲಿಗೆ ಸಮೀಪದ ಫೆದೊರ್‌ತ್ಸವೊ ಎಂಬಲ್ಲಿಯ ಸೆರ್ಗಿವ್-ಪೊಸಾದ್ ಕನ್‌ಫೆಕ್ಷನರಿ ಘಟಕದಲ್ಲಿ ಈ ವಿಲಕ್ಷಣ ಅವಘಡ ಸಂಭವಿಸಿದೆ. ಎರಡು ಮಕ್ಕಳ ತಾಯಿ ಸ್ವೆಟ್ಲಾನಾ ರೋಸ್ಲಿನಾ ಈ ಅವಘಡದಲ್ಲಿ ಜೀವ ಕಳೆದುಕೊಂಡಿರುವ ನತದೃಷ್ಟೆ. ಕಡಾಯಿಯಲ್ಲಿ ಬಿದ್ದ ತನ್ನ ಮೊಬೈಲ್ ಫೋನ್ ಎತ್ತುವ ಪ್ರಯತ್ನದಲ್ಲಿ ಸ್ವೆಟ್ಲಾನಾ ಕಡಾಯಿಗೆ ಬಿದ್ದಿದ್ದಾಳೆ,ಆದರೆ ಮೇಲಕ್ಕೇಳಲು ಸಾಧ್ಯವಾಗದೆ ಸಾವನ್ನಪ್ಪಿದ್ದಾಳೆ ಅಥವಾ ಚಾಕೊಲೇಟ್ ದ್ರವಕ್ಕೆ ಇತರ ವಸ್ತುಗಳನ್ನು ಸುರಿಯುತ್ತಿದ್ದಾಗ ಆಯ ತಪ್ಪಿ ಕಡಾಯಿಯಲ್ಲಿ ಬಿದ್ದಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ.

ಮೃತ ಸ್ವೆಟ್ಲಾನಾಗೆ ಇಬ್ಬರು ಪುಟ್ಟಮಕ್ಕಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News