ಹಿಂಸಾತ್ಮಕ ರೀತಿಯಲ್ಲಿ ಜಾನುವಾರು ಸಾಗಾಟ : ಇಬ್ಬರ ಬಂಧನ
Update: 2016-12-15 18:23 IST
ಸುಳ್ಯ , ಡಿ.15 : ಬೆಳಂದೂರು-ಪೆರುವಾಜೆ ರಸ್ತೆಯ ನೀರ್ಕಜೆ ಎಂಬಲ್ಲಿ ಪಿಕ್‌ಅಪ್ ವಾಹನದಲ್ಲಿ ಅಕ್ರಮವಾಗಿ ಹೋರಿ ಹಾಗೂ ಹೋರಿ ಕರುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ಆರೋಪಿಗಳನ್ನು ಬೆಳ್ಳಾರೆ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಪಾಲ್ತಾಡು ಗ್ರಾಮದ ಬಂಬಿಲ ನಿವಾಸಿಗಳಾದ ಕೃಷ್ಣಪ್ಪ ಗೌಡ ಹಾಗೂ ಹೊನ್ನಪ್ಪ ಗೌಡ ಬಂಧಿತ ಆರೋಪಿಗಳು.
ಖಚಿತ ಮಾಹಿತಿ ಮೇರೆಗೆ ಬೆಳ್ಳಾರೆ ಠಾಣಾ ಉಪನಿರೀಕ್ಷಕ ಎಂ.ವಿ.ಚೆಲುವಯ್ಯ ನೇತೃತ್ವದಲ್ಲಿ ಸಿಬ್ಬಂದಿ ವರ್ಗದವರು ಪಿಕಪ್ ಪತ್ತೆ ಹಚ್ಚಿ 1 ಹೋರಿ, 2 ಹೋರಿ ಕರುಗಳ ಸಹಿತ ಪಿಕಪ್‌ನ್ನು ತಮ್ಮ ವಶಕ್ಕೆ ಪಡೆದು ಗೋ ಹತ್ಯಾ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.