ಡಿ.20-28: ಕೆಮ್ತೂರು ತುಳುನಾಟಕ ಪರ್ಬ
ಉಡುಪಿ, ಡಿ.15: ಉಡುಪಿ ತುಳುಕೂಟದ ವತಿಯಿಂದ 15ನೆ ವರ್ಷದ ದಿ.ಕೆಮ್ತೂರು ದೊಡ್ಡಣ್ಣ ಶೆಟ್ಟಿ ಸ್ಮರಣಾರ್ಥ ಕೆಮ್ತೂರು ತುಳುನಾಟಕ ಸ್ಪರ್ಧೆ ಯನ್ನು ಡಿ.20ರಿಂದ ಡಿ.28ರವರೆಗೆ ಪ್ರತಿದಿನ ಸಂಜೆ 6:30ಕ್ಕೆ ಉಡುಪಿ ಎಂಜಿಎಂ ಕಾಲೇಜಿನ ಮುದ್ದಣಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ.
ಡಿ.20ರಂದು ತೃಪ್ತಿ ಕಲಾವಿದರು ಕುಡ್ಲ ಇವರಿಂದ ‘ಬದುಕುನೆಂಚ’, ಡಿ.21ರಂದು ಸನ್ನಿಧಿ ಕಲಾವಿದರು ಉಡುಪಿ ಇವರಿಂದ ‘ಮಾಯೆದ ಬೊಲ್ಪು’, ಡಿ.22ರಂದು ಕೂಡ್ದಿ ಕಲಾವಿದೆರ್ ಪೆರ್ಡೂರು ಇವರಿಂದ ‘ಫೈಲ್ ನಂ. ಪತ್ತೊಂಜಿ’, ಡಿ.23ರಂದು ಕರಾವಳಿ ಕಲಾವಿದರು ಮಲ್ಪೆ ಇವರಿಂದ ‘ಬಗ್ಗನ ಭಾಗ್ಯೊ’, ಡಿ.24ರಂದು ಸಂಜೆ 6:30ಕ್ಕೆ ಭೂಮಿಗೀತಾ ಸಾಂಸ್ಕೃತಿಕ ವೇದಿಕೆ ಪಟ್ಲ ಇವರಿಂದ ‘ವಾರ್ಡ್ ನಂಬರ್ ಆಜಿ’, ಡಿ.25 ರಂದು ಭೂಮಿಕಾ ಹಾರಾಡಿ ಇವರಿಂದ ‘ಅರಕ್ಕ್‌ದ ಗುಡ್ಡೆ’, ಡಿ.26ರಂದು ನಮ ತುಳುವೆರ್ ಕಲಾ ಸಂಘಟನೆ ಮುದ್ರಾಡಿ ಇವರಿಂದ ‘ಕತ್ತಲೆಗ್ ಪತ್ತ್ ತರೆ’, ಡಿ.27ರಂದು ಸಂಗಮ ಕಲಾವಿದರು ಮಣಿಪಾಲ ಇವರಿಂದ ‘ವಾಲಿವಧೆ’, ಡಿ.28ರಂದು ನವಸುಮ ರಂಗಮಂಚ ಕೊಡವೂರು ಇವರಿಂದ ‘ಶೂದ್ರ ತಪಸ್ವಿ’ ನಾಟಕ ಪ್ರದರ್ಶನಗೊಳ್ಳಲಿದೆ.
ವಿಜೇತ ತಂಡಗಳಿಗೆ ಶಾಶ್ವತ ಫಲಕ, ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳೊಂದಿಗೆ 15ಸಾವಿರ ರೂ., 10ಸಾವಿರ ರೂ., 7,ಸಾವಿರ ರೂ. ನಗದು ಬಹುಮಾನ, ಅಲ್ಲದೇ ನಿರ್ದೇಶನ, ಸಂಗೀತ, ರಂಗವಿನ್ಯಾಸ, ಬೆಳಕು, ನಟ, ನಟಿ, ಬಾಲ ನಟ, ಹಾಗೂ ಬಾಲನಟಿ ಪ್ರತೀ ವಿಭಾಗಗಳಲ್ಲಿ ಪ್ರಥಮ 1,000 ರೂ. ಮತ್ತು ದ್ವಿತೀಯ, ತೃತೀಯ ಬಹುಮಾನ ನೀಡಲಾಗುವುದು. ಸ್ಪರ್ಧೆಗೆ ಆಯ್ಕೆಯಾದ ರಾಜ್ಯದೊಳಗಿನ ತಂಡಗಳಿಗೆ 5,000ರೂ. ಹಾಗೂ ಹೊರರಾಜ್ಯದ ತಂಡಗಳಿಗೆ 10,000ರೂ. ಭತ್ಯೆಯೊಂದಿಗೆ ಊಟ ಉಪ ಚಾರ ಹಾಗೂ ಉತ್ತಮ ಸೌಕರ್ಯಗಳನ್ನು ಒದಗಿಸಲಾಗುವುದು. ಡಿ.20ರಂದು ಸಂಜೆ 6ಗಂಟೆಗೆ ತುಳು ನಾಟಕ ಸ್ಪರ್ಧೆಯನ್ನು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಉದ್ಘಾಟಿಸಲಿರುವರು ಎಂದು ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಹಾಗೂ ನಾಟಕ ಸ್ಪರ್ಧಾ ಸಮಿತಿ ಸಂಚಾಲಕ ಬಿ.ಪ್ರಭಾಕರ ಭಂಡಾರಿ ತಿಳಿಸಿದ್ದಾರೆ.