ಟ್ಯಾಲೆಂಟ್ ವತಿಯಿಂದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ
ಮಂಗಳೂರು, ಡಿ.15 : ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ವತಿಯಿಂದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಇ ಕ್ಯೂಬೇಟ್-ಪ್ರೇರಣೆ, ನೆನಪು ಮತ್ತು ಅಧ್ಯಯನ ಕೌಶಲ್ಯ” “ಎಂಬ ವಿಷಯದಲ್ಲಿ ಕಾರ್ಯಾಗಾರವು ಮಂಗಳೂರು ಪುರಭವನದಲ್ಲಿ ನಡೆಯಿತು.
ಕಾರ್ಯಾಗಾರವನ್ನು ಮುಹಮ್ಮದ್ ಹನೀಫ್, ರೀಜೆನ್ಸಿ ಎಂಟರ್‌ಪ್ರೈಸಸ್ ಉದ್ಘಾಟಿಸಿದರು.
ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಸಿಗ್ಮಾ ಇಂಡಿಯಾ” ದ ಸ್ಥಾಪಕ ಮತ್ತು ಸಿ.ಇ.ಒ ಹಾಗೂ ಅಂತರಾಷ್ಟ್ರೀಯ ತರಬೇತುದಾರ ಅಮೀನ್ ಇ -ಮುದಸ್ಸರ್ ಭಾಗವಹಿಸಿ ವಿದ್ಯಾರ್ಥಿಗಳಿಗೆ ಸ್ಫೂರ್ತಿಯನ್ನು ತುಂಬಿದರು.
ಮುಖ್ಯ ಅತಿಥಿಗಳಾಗಿ ಅಹ್ಮದ್ ಶರೀಫ್, ಫಾತಿಮಾ ಟ್ರೇಡರ್ಸ್, ಸಂಪತ್ ಶೆಟ್ಟಿ, ಪ್ರಣವ ಬಿಲ್ಡರ್ಸ್ & ಡೆವಲಪರ್ಸ್, ಗಾಡ್ವಿನ್ ಎಚ್ ಡಿಸಿಲ್ವ, ಲೋಟಸ್ ಬಿಲ್ಡರ್ಸ್ & ಡೆವಲಪರ್ಸ್, ಜಮಾಲ್ ಅಬ್ಬಾಸ್, ಸೀಸನ್ ಫೆಸ್ಟ್ & ಉಡುಪಿ ಡೆವಲಪರ್ಸ್, ಅಬ್ದುಲ್ ಬಷೀರ್, ಡೆಕ್ಕನ್ ಪ್ಲಾಸ್ಟ್, ಸುಲೈಮಾನ್ ಶೇಖ್ ಬೆಳುವಾಯಿ, ವಿಶ್ವಾಸ್ ಎಸ್ಟೇಟ್ಸ್ ಮೊದಲಾದವರು ಉಪಸ್ಥಿತರಿದ್ದರು.
ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‌ನ ಅಧ್ಯಕ್ಷ ರಿಯಾರ್ ಕಣ್ಣೂರು ಸ್ವಾಗತಿಸಿದರು.
ಅಸ್ಫರ್ ಹುಸೈನ್ ಧನ್ಯವಾದಗೈದರು. ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.
ಜಿಲ್ಲೆಯ ವಿವಿಧ ಶಾಲೆಗಳ 500 ಕ್ಕಿಂತ ಅಧಿಕ ವಿದ್ಯಾರ್ಥಿಗಳು ಹಾಗೂ ಅವರ ಶಿಕ್ಷಕಿಯರು ಕಾರ್ಯಾಗಾರದ ಪ್ರಯೋಜನ ಪಡೆದರು.